ನಮ್ಮ ಕರ್ನಾಟಕ ವೈಭವಕ್ಕೆ ಸ್ವಾಗತ, ಸುಸ್ವಾಗತ

ಕನ್ನಡ ನಾಡಿನ ಅಂದವ ನೋಡ, ಸಾಹಿತ್ಯ ಸಂಸ್ಕೃತಿಯ ಕಲೆಬೀಡ, ಕನ್ನಡ ನಾಡಿನ ಅಂದವ ಸವಿಯ ಬಾರ, ನೀ ಬಂದು ಒಮ್ಮೆ ನೋಡ ಬಾರ, -(ಮಾ.ಕೃ.ಮಂಜು) ಇದು ಕನ್ನಡ ನಾಡಿನ ದೇವಾಲಯಗಳು, ಪ್ರಸಿದ್ಧ ಸ್ಥಳಗಳನ್ನು ಪರಿಚಯಿಸುವ ತಾಣ. ಕರ್ನಾಟಕದ ವೈಭವವನ್ನು ಜಗತ್ತಿಗೆ ಪರಿಚಯಿಸುವ ಪುಟ್ಟ ಪ್ರಯತ್ನ.
ಬಂಧುಗಳೇ ನಿಮ್ಮ ಊರಿನ ಪ್ರಸಿದ್ಧವಾದ ಸ್ಥಳಗಳ, ದೇವಾಲಯಗಳ ಪೋಟೋಗಳನ್ನು/ಮಾಹಿತಿಗಳನ್ನು "ನಮ್ಮ ಕರ್ನಾಟಕ ವೈಭವ"ದಲ್ಲಿ ಮೂಡಿಬರಬೇಕೇ ಹಾಗಿದ್ದರೆ ನನಗೆ ಮೇಲ್ ಕಳುಹಿಸಿಕೊಡಿ.
ನನ್ನ ಮೇಲ್ : makrumanju@gmail.com

Saturday, November 16, 2013

ಬೆಂಗಳೂರಿನ ಕೋಟೆ ಶ್ರೀ ವೆಂಕಟರಮಣಸ್ವಾಮಿ ಸನ್ನಿಧಿ


ಶ್ರೀ ಪ್ರಸನ್ನ ವೆಂಕಟರಮಣ ದೇವಾಲಯ, ಬೆಂಗಳೂರು, ಸಿಟಿ ಮಾರುಕಟ್ಟೆಬೆಂಗಳೂರಿನಲ್ಲಿರುವ ಪುರಾತನ ದೇವಾಲಯಗಳ ಪೈಕಿ ಕೋಟೆ ಶ್ರೀ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯವೂ ಒಂದು. ಬಸವನಗುಡಿ, ಚಾಮರಾಜಪೇಟೆ ಕಡೆಯಿಂದ ಕೃಷ್ಣರಾಜೇಂದ್ರ ಮಾರುಕಟ್ಟೆಗೆ ಹೋಗುವ ಮಾರ್ಗದಲ್ಲಿ ಈ ದೇವಾಲಯ ಇದೆ.

ಟಿಪ್ಪು ಸುಲ್ತಾನರು ಕಟ್ಟಿಸಿದ ಬೇಸಿಗೆ ಅರಮನೆ ಹಿಂದಿರುವ ಈ ಸುಂದರ ಶಿಲಾ ದೇವಾಲಯವನ್ನು ಚಿಕ್ಕ ದೇವರಾಜ ಒಡೆಯರು 1695ರಲ್ಲಿ ಕಟ್ಟಿಸಿದರೆಂದು ಶಾಸನದಿಂದ ತಿಳಿದುಬರುತ್ತದೆ. ದ್ರಾವಿಡ ಶೈಲಿಯಲ್ಲಿರುವ ಈ ದೇವಾಲಯ ವಿಜಯನಗರ ಅರಸರ ಕಾಲದ ವಾಸ್ತುಶೈಲಿಯನ್ನು ಒಳಗೊಂಡಿದೆ.

ದೇವಾಲಯದ ಮುಂಭಾಗದಲ್ಲಿ ಏಕಶಿಲೆಯ ಎಂಟು ಮೂಲೆಗಳ ಬೃಹತ್ ಗರುಡಗಂಬವಿದೆ. ಕಂಬದ ಅಡಿ ಭಾಗದಲ್ಲಿ ಶಂಖ, ಚಕ್ರ, ನಾಮ ಹಾಗೂ ಗರುಡ, ಶ್ರೀ ಪ್ರಸನ್ನ ವೆಂಕಟರಮಣ ದೇವಾಲಯ, ಬೆಂಗಳೂರು, ಸಿಟಿ ಮಾರುಕಟ್ಟೆಹನುಮನ ಉಬ್ಬು ಶಿಲ್ಪಗಳಿವೆ. ಈ ದೇವಾಲಯದಲ್ಲಿ ಸುಂದರ ಕೆತ್ತನೆಯ ಕಂಬಗಳಿವೆ. 9 ಅಂಕಣಗಳ ಮುಖಮಂಟಪ, ನವರಂಗ, ಸುಕನಾಸಿ ಮತ್ತು ಗರ್ಭಗೃಹವಿದೆ.

ದೇವಾಲಯದ ಭಿತ್ತಿಗೆ ಹೊಂದಿಕೊಂಡಂತೆ ಇರುವ ಕಂಬಗಳಲ್ಲಿ ಗೋಡೆಯಿಂದ ಮುಂದೆ ಚಾಚಿದಂತಿರುವ ಕೆತ್ತನೆಯಲ್ಲಿ ಆನೆ ಮತ್ತು ಸಿಂಹದ ಮೇಲೆ ಕುಳಿತ ವೀರರ ಶಿಲ್ಪಗಳಿವೆ. ಮುಖ್ಯ ಪ್ರವೇಶದ್ವಾರಕ್ಕೆ ನೇರವಾಗಿ ಇರುವ ಪ್ರಧಾನ ಗರ್ಭಗುಡಿಯಲ್ಲಿ ಪ್ರಸನ್ನ ವೆಂಕಟರಮಣ ಸ್ವಾಮಿಯ ಸುಂದರ ಮೂರ್ತಿಯಿದೆ.

ಗರ್ಭಗೃಹದ ಎರಡೂ ಪಕ್ಕದಲ್ಲಿ ಜಯವಿಜಯರ ಆಳೆತ್ತರದ ಮೂರ್ತಿಗಳಿವೆ. ವೆಂಕಟರಮಣ ಸ್ವಾಮಿಯ ಗರ್ಭಗುಡಿಯ ಎಡ ಭಾಗದಲ್ಲಿರುವ ಹೊರಗೋಡೆಯ ಒಂದು ಪಟ್ಟಿಕೆಯಲ್ಲಿ ಬಸವನ ಮೇಲೆ ಕುಳಿತ ಶಿವ ಪಾರ್ವತಿ, ಗರಡನ ಮೇಲೆ ಕುಳಿತ ವಿಷ್ಣು, ಹಂಸಪಕ್ಷಿಯ ಮೇಲೆ ಕುಳಿತ ಬ್ರಹ್ಮ, ಗಾಯತ್ರಿ ದೇವಿ, ಗಿರಿಜಾ ಕಲ್ಯಾಣ, ಸಪ್ತರ್ಷಿಗಳು ಮತ್ತು ಸಪ್ತಮಾತೃಕೆಯರ ಸುಂದರ ಉಬ್ಬುಶಿಲ್ಪಗಳಿವೆ.

ಶ್ರೀ ಪ್ರಸನ್ನ ವೆಂಕಟರಮಣ ದೇವಾಲಯ, ಬೆಂಗಳೂರು, ಸಿಟಿ ಮಾರುಕಟ್ಟೆವೆಂಕಟರಮಣಸ್ವಾಮಿಯ ಎಡ ಭಾಗದಲ್ಲಿರುವ ಗುಡಿಯಲ್ಲಿ ಅಮ್ಮನವರ ಗುಡಿಯಿದೆ. ಇಲ್ಲಿ ಸುಂದರವಾದ ಮಹಾಲಕ್ಷ್ಮೀಯ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಎರಡೂ ದೇವಾಲಯಗಳ ಗರ್ಭಗೃಹದ ದ್ವಾರಕಂಬಗಳಿಗೆ ಲೋಹದ ತಗಡುಗಳಿಂದ ಅಲಂಕರಿಸಲಾಗಿದೆ. ದೇವಾಲಯದ ಮುಂಭಾಗದಲ್ಲಿರುವ ಗರುಡ ಗಂಭಕ್ಕೆ ಸಹ ಹಿತ್ತಾಳೆಯ ಕವಚ ತೊಡಿಸಲಾಗಿದೆ. ಕಂಬದ ಅಡಿಯಲ್ಲಿರುವ ಶಿಲ್ಪಗಳು ಹಾಳಾಗದಂತೆ ಕಬ್ಬಿಣದ ಜಾಲರಿಗಳಿಂದ ಸಂರಕ್ಷಿಸಲಾಗಿದೆ.

ದೇವಾಲಯದ ಎಡ ಮತ್ತ ಬಲಭಾಗದಲ್ಲಿ ಇತ್ತೀಚೆಗೆ ವಿಸ್ತರಣೆ ಮಾಡಲಾಗಿದ್ದು, ಆಧುನಿಕ ಶ್ರೀ ಪ್ರಸನ್ನ ವೆಂಕಟರಮಣ ದೇವಾಲಯ, ಬೆಂಗಳೂರು, ಸಿಟಿ ಮಾರುಕಟ್ಟೆನಿರ್ಮಾಣದ ಈ ಕಟ್ಟಡಗಳ ಮೇಲ್ಭಾಗದಲ್ಲಿ ಗಾರೆಯ ಗೂಡು ಗೋಪುರಗಳಿದ್ದು ಅವುಗಳಲ್ಲಿ ದಶಾವತಾರ, ವಿಷ್ಣು, ಲಕ್ಷ್ಮೀ, ಸೀತಾಲಕ್ಷ್ಮಣ ಸಮೇತ ಶ್ರೀರಾಮನ ಮೂರ್ತಿಗಳನ್ನು ಕೆತ್ತಲಾಗಿದೆ. ಮಂಟಪಗಳಲ್ಲಿರುವ ಕಂಬಗಳಲ್ಲಿ ಇಂದ್ರ, ಅಗ್ನಿ, ವಾಯು, ಕುಬೇರನೇ ಮೊದಲಾದ ಹಲವು ಮೂರ್ತಿಗಳನ್ನು ನಿರ್ಮಿಸಲಾಗಿದೆ. ದೇವಾಲಯದ ಹಿಂಭಾಗದಲ್ಲಿ ವರ್ಣಮಯ ಗಾಜಿನ ಮನೆಯಿದ್ದು ಇಲ್ಲಿ ಉತ್ಸವ ಮೂರ್ತಿಯಿದೆ. ಇಲ್ಲಿ ವಿಶೇಷ ಉತ್ಸವಗಳು, ಉಯ್ಯಾಲೆ ಸೇವೆ ನಡೆಯುತ್ತದೆ. ದೀಪದ ಬೆಳಕಲ್ಲಿ, ಕನ್ನಡಿಯ ಪ್ರತಿಬಿಂಬದಲ್ಲಿ ಇಲ್ಲಿ ದೇವರ ಸೊಬಗನ್ನು ಕಾಣುವುದೇ ಒಂದು ಸೊಗಸು.

1 comment:

 1. ® ಲೇಖನಗಳನ್ನೂ ನೋಡಿ ತುಂಬಾ ಸಂತೋಷವಾಯಿತು.
  visit my site

  http://spn3187.blogspot.in/

  Also say Your Friends
  Find me

  ReplyDelete