ನಮ್ಮ ಕರ್ನಾಟಕ ವೈಭವಕ್ಕೆ ಸ್ವಾಗತ, ಸುಸ್ವಾಗತ

ಕನ್ನಡ ನಾಡಿನ ಅಂದವ ನೋಡ, ಸಾಹಿತ್ಯ ಸಂಸ್ಕೃತಿಯ ಕಲೆಬೀಡ, ಕನ್ನಡ ನಾಡಿನ ಅಂದವ ಸವಿಯ ಬಾರ, ನೀ ಬಂದು ಒಮ್ಮೆ ನೋಡ ಬಾರ, -(ಮಾ.ಕೃ.ಮಂಜು) ಇದು ಕನ್ನಡ ನಾಡಿನ ದೇವಾಲಯಗಳು, ಪ್ರಸಿದ್ಧ ಸ್ಥಳಗಳನ್ನು ಪರಿಚಯಿಸುವ ತಾಣ. ಕರ್ನಾಟಕದ ವೈಭವವನ್ನು ಜಗತ್ತಿಗೆ ಪರಿಚಯಿಸುವ ಪುಟ್ಟ ಪ್ರಯತ್ನ.
ಬಂಧುಗಳೇ ನಿಮ್ಮ ಊರಿನ ಪ್ರಸಿದ್ಧವಾದ ಸ್ಥಳಗಳ, ದೇವಾಲಯಗಳ ಪೋಟೋಗಳನ್ನು/ಮಾಹಿತಿಗಳನ್ನು "ನಮ್ಮ ಕರ್ನಾಟಕ ವೈಭವ"ದಲ್ಲಿ ಮೂಡಿಬರಬೇಕೇ ಹಾಗಿದ್ದರೆ ನನಗೆ ಮೇಲ್ ಕಳುಹಿಸಿಕೊಡಿ.
ನನ್ನ ಮೇಲ್ : makrumanju@gmail.com

Saturday, November 16, 2013

''ಕುಮಾರ ಪರ್ವತ'' (ಕುಕ್ಕೆ ಸುಬ್ರಮಣ್ಯ)

''ಕುಮಾರ ಪರ್ವತ'' (ಕುಕ್ಕೆ ಸುಬ್ರಮಣ್ಯ) 
ದಕ್ಷಿಣ ಭಾರತದ ಅತ್ಯಂತ ಎತ್ತರದ ಗಿರಿಶೃಂಗ ''ಕುಮಾರ ಪರ್ವತ'' (ಕುಕ್ಕೆ ಸುಬ್ರಮಣ್ಯ) ಇದನ್ನು ಪುಷ್ಪಗಿರಿ ಎಂದು ಕರೆಯುತ್ತಾರೆ. ಈ ಕ್ಷೇತ್ರ. ಪೌರಾಣಿಕ. ಐತಿಹಾಸಿಕ ಮತ್ತು ಧಾರ್ಮಿಕ ಹಿನ್ನೆಲೆಯನ್ನು ಹೊಂದಿದೆ. ವಿಶ್ವದ ಅತಿ ದೊಡ್ಡ ನಾಗಗಳಾದ ಕಾಳಿಂಗ ಸರ್ಪಗಳ ಅರಣ್ಯ ಎಂದೆನಿಸಿಕೊಂಡಿದೆ. ಶಿವಸುತನಾದ ಕುಮಾರಸ್ವಾಮಿಗೆ ''ಸುಬ್ರಮಣ್ಯ''ಎಂಬ ಪರ್ಯಾಯ ನಾಮವೋ ಇದೆ. ಬ್ರಹ್ಮನ ಶಾಪದಿಂದ ಸುಬ್ರಮಣ್ಯನು ಭಯಂಕರವಾದ ವಿಷವುಳ್ಳ ಘಟ ಸರ್ಪವಾದಾಗ ತಾಯಿ ಪಾರ್ವತಿ ದೇವಿಯು. ಈ ಕ್ಷೇತ್ರದಲ್ಲಿ ನೊರೆಂಟು ಷಷ್ಠಿಗಳ ವ್ರತ ಹಾಗೂ ಉದ್ಯಾಪನೆ ಮಾಡಿ ವಿಷ್ಣು ಸ್ವರ್ಶದಿಂದ ಶಾಪ ವಿಮೋಚನೆಯಾಗುತ್ತದೆ. ಹಾಗಾಗಿ ಈ ಗಿರಿಯನ್ನು ಕುಮಾರ ಪರ್ವತ ಅಥವಾ ಕುಕ್ಕೆ ಸುಬ್ರಮಣ್ಯ ಎಂದು ಕರೆಯುತ್ತಾರೆ. ಮಾಹಾಭಾರತದ ಜನಮೇಜಯನ ಸರ್ಪಯಾಗದ ಸಂದರ್ಭದಲ್ಲಿ ಈ ಕ್ಷೇತ್ರ ತಕ್ಷಕ ಮತ್ತು ವಾಸುಕಿಯರ ತಪೋಭೂಮಿ ಆಗಿತ್ತು. ಈ ಎಲ್ಲಾ ಹಿನ್ನೆಲೆಯಲ್ಲಿ ಈ ಪವಿತ್ರ ಭೂಮಿ ನಾಗಾರಾಧನೆಯ ಅತಿ ಶ್ರೇಷ್ಠ ಪೂಜಾ ತಾಣವಾಗಿದೆ. ಈ ಪುಣ್ಯಭೂಮಿಯ ಲಕ್ಷಣಗಳನ್ನು ಅತಿ ಸೂಕ್ಷ್ಮವಾಗಿ ಗೂಗಲ್ ಅರ್ಥ್ ನಲ್ಲಿ ಪರಿವೀಕ್ಷಣೆ ಮಾಡುವಾಗ ಕಂಡ ಚಮತ್ಕಾರಿಕ ನಾಗರೊಪ ಛಾಯಾಚಿತ್ರಗಳನ್ನು ಇಲ್ಲಿ ತೋರಿಸಲಾಗಿದೆ.

No comments:

Post a Comment