ನಮ್ಮ ಕರ್ನಾಟಕ ವೈಭವಕ್ಕೆ ಸ್ವಾಗತ, ಸುಸ್ವಾಗತ

ಕನ್ನಡ ನಾಡಿನ ಅಂದವ ನೋಡ, ಸಾಹಿತ್ಯ ಸಂಸ್ಕೃತಿಯ ಕಲೆಬೀಡ, ಕನ್ನಡ ನಾಡಿನ ಅಂದವ ಸವಿಯ ಬಾರ, ನೀ ಬಂದು ಒಮ್ಮೆ ನೋಡ ಬಾರ, -(ಮಾ.ಕೃ.ಮಂಜು) ಇದು ಕನ್ನಡ ನಾಡಿನ ದೇವಾಲಯಗಳು, ಪ್ರಸಿದ್ಧ ಸ್ಥಳಗಳನ್ನು ಪರಿಚಯಿಸುವ ತಾಣ. ಕರ್ನಾಟಕದ ವೈಭವವನ್ನು ಜಗತ್ತಿಗೆ ಪರಿಚಯಿಸುವ ಪುಟ್ಟ ಪ್ರಯತ್ನ.
ಬಂಧುಗಳೇ ನಿಮ್ಮ ಊರಿನ ಪ್ರಸಿದ್ಧವಾದ ಸ್ಥಳಗಳ, ದೇವಾಲಯಗಳ ಪೋಟೋಗಳನ್ನು/ಮಾಹಿತಿಗಳನ್ನು "ನಮ್ಮ ಕರ್ನಾಟಕ ವೈಭವ"ದಲ್ಲಿ ಮೂಡಿಬರಬೇಕೇ ಹಾಗಿದ್ದರೆ ನನಗೆ ಮೇಲ್ ಕಳುಹಿಸಿಕೊಡಿ.
ನನ್ನ ಮೇಲ್ : makrumanju@gmail.com

ಶುಕ್ರವಾರ 17 ಫೆಬ್ರವರೀ 2012

ಮಾಕಳಿಯ ಪ್ರಮುಖ ದೇವಾಲಯಗಳು

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕು ಮಾಕಳಿ ಗ್ರಾಮ

ಮಾಕಳಿ ಗ್ರಾಮದ ಕೃಷ್ಣಗಿರಿ ಬೆಟ್ಟ
 ಮಾಕಳಿ ಗ್ರಾಮದ ದೇವತೆಗಳಾದ ಹಿರಿಯಮ್ಮ, ಮುತ್ತಲಮ್ಮ ದೇವತೆಗಳ ಉತ್ಸವದ ಚಿತ್ರ
 ಬೊಮ್ಮಲಿಂಗಪ್ಪ ದೇವಸ್ಥಾನ
  ಬೊಮ್ಮಲಿಂಗಪ್ಪ ದೇವಸ್ಥಾನ

 ಹಿರಿಯಮ್ಮ ದೇವಸ್ಥಾನ
 ಹಿರಿಯಮ್ಮ ದೇವಸ್ಥಾನ
 ಹಿರಿಯಮ್ಮ ದೇವತೆ
  ಹಿರಿಯಮ್ಮ ದೇವತೆ
 ಭಲ್ಲೇಲಿಂಗೇಶ್ವರ ದೇವಸ್ಥಾನ

ಮಾಕಳಿಯ ಚಿತ್ರಣ

ರವಿವಾರ 12 ಫೆಬ್ರವರೀ 2012

ಬುಧವಾರ 8 ಫೆಬ್ರವರೀ 2012

ನುಡಿಮುತ್ತುಗಳು ಬ್ಲಾಗ್ 20000 ಸಂಭ್ರಮ


ಇಪ್ಪತ್ತು ಸಾವಿರದ ಸಂಭ್ರಮದಲ್ಲಿ

ನನ್ನ ಪ್ರಯತ್ನಕ್ಕೆ ಇಷ್ಟೊಂದು ಪ್ರೋತ್ಸಾಹ ದೊರಕ್ಕುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ. ನನ್ನ ನುಡಿಮುತ್ತುಗಳು ಬ್ಲಾಗ್ ಕಳೆದ ನವೆಂಬರ್ ತಿಂಗಳಲ್ಲಿ ಹದಿನಾರು ಸಾವಿರ ಬಾರಿ ವೀಕ್ಷಣೆಯಾಗಿತ್ತು. ಈಗ ಕೇವಲ ಎರಡುವರೆ ತಿಂಗಳಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ಇದರೊಂದಿಗೆ ಒಟ್ಟು 20,000 ಬಾರಿ ವೀಕ್ಷಣೆಯಾಗಿದೆ. ಪ್ರತಿಯೊಬ್ಬರ ಜೀವನಕ್ಕೆ ಅವಶ್ಯಕವಾಗಿರುವ ಆದರ್ಶ ವ್ಯಕ್ತಿಗಳ ಮಾತುಗಳು ತುಂಬಾ ಅವಶ್ಯಕ. ಇವುಗಳ ವ್ಯಕ್ತಿಗಳ ಗುರಿಯೆಡೆಗೆ ತಲುಪಿಸುವಲ್ಲಿ ಸಹಕಾರಿಯಾಗಿವೆ. ಕನ್ನಡದಲ್ಲಿ ನುಡಿಮುತ್ತುಗಳ ಸಂಗ್ರಹದ ಕೆಲಸಕ್ಕೆ ಮನ್ನಣೆ ದೊರೆತು, ಈ ತರಹದ ಕನ್ನಡದ ಬ್ಲಾಗ್ ಗಳನ್ನು ಪ್ರೋತ್ಸಾಹಿಸಿರುವುದಕ್ಕೆ ತುಂಬಾ ಋಣಿಯಾಗಿರುತ್ತೇನೆ. ಮುಂದಿನ ದಿನಗಳಲ್ಲಿ ಇಂತಹ ಕೆಲಸಗಳನ್ನು ಮುಂದುವರಿಸುತ್ತೇನೆ. ಎಲ್ಲಾ ಕನ್ನಡಾಭಿಮಾನಿಗಳಿಗೆ ವಂದನೆಗಳು.

ನುಡಿಮುತ್ತುಗಳು ಬ್ಲಾಗ್ 2009 ಜೂನ್ ತಿಂಗಳಲ್ಲಿ ಪ್ರಾರಂಭವಾಯಿತು. ನಂತರ ತನ್ನ ವಿಸ್ತಾರತೆಯನ್ನು ಬೆಳಸಿಕೊಂಡು ಓದುಗರ ಸಂಖ್ಯೆಯನ್ನು ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಾ ಸಾಗುತ್ತಿದೆ. ಈ ದಿನದ ಪ್ರಕಾರ ನನ್ನ ಬ್ಲಾಗಿನ ಅಂಕಿಅಂಶ ಈ ಕೆಳಕಂಡತ್ತಿದೆ.

India
19,253
United States
130
United Arab Emirates
109
Saudi Arabia
69
Kuwait
62
Norway
53
Germany
30
United Kingdom
24
Malaysia
20
Singapore
13 
Total : 20,013
as per date: 08/02/2012

ಕನ್ನಡ ಬಳಸಿ - ಕನ್ನಡ ಉಳಿಸಿ

ಇಂತಿ ನಿಮ್ಮವ,
ಮಂಜುನಾಥ್.ಎಂ.ಕೆ

ಮಂಗಳವಾರ 7 ಫೆಬ್ರವರೀ 2012

ಕನ್ನಡ ಉಸಿರಾಗಲಿ

ಕನ್ನಡ ರಾಜ್ಯ ಉದಯವಾಗಿ 55 ವರ್ಷಗಳೇ ಕಳೆದರೂ ಕೂಡ ಕನ್ನಡ ನಾಡಿನಲ್ಲಿ ಕನ್ನಡ ಭಾಷೆಗೆ ಭದ್ರವಾದ ನೆಲೆಯಿಲ್ಲದಾಗಿರುವುದು ಸೋಚನೀಯ ಸ್ಥಿತಿಯಾಗಿದೆ. ಕನ್ನಡ ನಾಡು ಉದಯವಾಗಲು ಸಾವಿರಾರು ಮಹಾನೀಯರ ಹೋರಾಟ ವ್ಯರ್ಥವಾಗುತ್ತಿದೆ ಅನಿಸುತ್ತದೆ. ಏಕೆಂದರೆ ಇದುವರೆಗೂ ಕನ್ನಡ ಭಾಷೆ ಕರ್ನಾಟಕ ರಾಜ್ಯದ ಆಡಳಿತ ಭಾಷೆಯಾಗಿ ಜಾರಿಯಾಗಿಲ್ಲ. ಕೇವಲ ಹಳ್ಳಿಗಳಲ್ಲಿ ಮಾತ್ರ ಕನ್ನಡ ಬಳಸುವವರನ್ನು ಕಾಣಬಹುದಾಗಿದೆ. ನಗರಗಳನ್ನು ನೋಡುವುದಾದರೆ ಅನ್ಯ ಭಾಷೆಗಳ ದರ್ಬಾರಿನಲ್ಲಿ ಕನ್ನಡ ತನ್ನ ಮೂಲ ನೆಲೆಯನ್ನು ಕಳೆದುಕೊಂಡಿದೆ. ಉದಾಹರಣೆಗೆ ರಾಜಧಾನಿ ಬೆಂಗಳೂರನ್ನೇ ನೋಡುವುದಾದರೆ ಶೇ.50ಕ್ಕೂ ಹೆಚ್ಚಿನ ಜನರು ಅನ್ಯ ಭಾಷಿಗರ ನೆಲೆಯಾಗಿದೆ. ಮುಂದೊಂದು ದಿನ ಬೆಂಗಳೂರು ಬೇರೆ ಭಾಷಿಗರ ತಾಣವಾಗಿ ಮಾರ್ಪಟ್ಟು ಕನ್ನಡ ಭಾಷಿಗರು ಬೆಂಗಳೂರಿನಲ್ಲಿ ನೆಲೆ ಕಳೆದುಕೊಳ್ಳಬೇಕಾಗಿ ಬರಬಹುದರಲ್ಲಿ ಯಾವುದೇ ಅನುಮಾನವಿಲ್ಲ. ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಜನರನ್ನು ಭಾಗವಹಿಸಿವಂತೆ ಮಾಡುವಲ್ಲಿ ಕವಿಗಳ ಪಾತ್ರ ತುಂಬಾ ದೊಡ್ಡದು. ಕವಿಗಳು ತಮ್ಮ ಕವಿತೆಗಳ ಮೂಖಾಂತರ ಜನರಲ್ಲಿ ಕನ್ನಡದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದದು ಈಗ ಇತಿಹಾಸ. ಈಗ ಅಂತಹದೇ ಪರಿಸ್ಥಿತಿ ಎದುರಾಗಿದೆ. ಕವಿಗಳು ಕನ್ನಡಿಗರಲ್ಲಿ ಸ್ವಾಭಿಮಾನ ಮೂಡಿಸಬೇಕಾಗಿದೆ. ಈ ಹಿಂದಿನ ಕವಿಗಳ ಕವಿಗಳು ಈಗಲೂ ಪ್ರಸ್ತುತವಾಗಿವೆ. ಅವುಗಳಲ್ಲಿ ಕೆಲವನ್ನು ಈ ಕೆಳಕಂಡಂತೆ ಕಾಣಬಹುದು.

ಸಾಯುತಿದೆ ನಿಮ್ಮ ನುಡಿ, ಓ ಕನ್ನಡದ ಕಂದರಿರ!
ಹೊರನುಡಿಯ ಹೊರೆಯಿಂದ ಕುಸಿದು ಕುಗ್ಗಿ!
ಕಣ್ದೆರೆಯಿರೇಳಿ, ಓ ಕನ್ನಡದ ಮಕ್ಕಳಿರ 
ಗರ್ಜಿಸುವುದ ಕಲಿತು ಸಿಂಹವಾಗಿ!
ಮೇಲಿನ ರಾಷ್ಟ್ರಕವಿ ಕುವೆಂಪುರವರ ಕವಿತೆ ಈಗ ತುಂಬಾ ಪ್ರಸ್ತುತವಾಗಿದೆ. ಕನ್ನಡದ ಅವಿಭಾಜ್ಯ ಅಂಗವಾಗಿರುವ ಬೆಳಗಾವಿಯಲ್ಲಿ ಮರಾಠಿಗರ ದಬ್ಬಾಳಿಕೆಗೆ ಕೊನೆಯಿಲ್ಲದಾಗಿದೆ. ಇಂಥ ಪ್ರಕರಣ ಎಷ್ಟೋ ಇವೆ. ಉದಾ: ಕೇರಳದಲ್ಲಿರುವ ಕಾಸರಗೂಡು ಪ್ರದೇಶ ಅಪ್ಪಟ ಕನ್ನಡ ನೆಲೆಗೆ ರಕ್ಷಣೆ ಇಲ್ಲದಾಗಿದೆ.

ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು
ಬದುಕು ಬಲಹಿನ ನಿಧಿಯು ಸದಭಿಮಾನದ ಗೂಡು
ಈ ಕಾವ್ಯವನ್ನು ಏಕೀಕರಣದಲ್ಲಿ ಹುಯಿಲಗೊಳ ನಾರಾಯಣರಾವ್ ಅವರು ಕನ್ನಡ ರಾಜ್ಯದ ಉದಯವಾಗಲೀ ಎಂಬ ಆಶಯದಿಂದ ಬರೆದರು. 56ವರ್ಷಗಳು ಕಳೆದರೂ ಸದಭಿಮಾನದ ಗೂಡಾಗಿ ನಿರ್ಮಾಣವಾಗಿಲ್ಲ. ಇಂಥ ಕವಿತೆಗಳು ಇಂದಿಗೂ ಕನ್ನಡಿಗರಲ್ಲಿ ಜಾಗೃತಿಯ ಕಹಳೆ ಮೊಳಗಿಸಲು ಸಹಕಾರಿಯಾಗಿವೆ.

ಕನ್ನಡವನುಳಿದೆನಗೆ ಅನ್ಯ ಜೀವನವಿಲ್ಲ
ಕನ್ನಡವೇ ಎನ್ನುಸಿರು ಹೆತ್ತೆನ್ನ ತಾಯಿ
ಕನ್ನಡವೇ ಧನ ಧಾನ್ಯ ಕನ್ನಡವೇ ಮನೆ ಮಾನ್ಯ
ಕನ್ನಡವೇ ಎನಗಾಯ್ತು ಕಣ್ಣು ಕಿವಿ ಬಾಯಿ
ಬೆನಗಲ್ ರಾಮರಾವ್ ರ ಈ ಕವಿತೆಯಲ್ಲಿ ಕನ್ನಡವೆಂದರೇ ಕೇವಲ ನುಡಿಯಲ್ಲ. ಪ್ರತಿಯೊಬ್ಬ ಕನ್ನಡಿಗರ ಜೀವನ ಹಾಗೂ ಉಸಿರಾಗಬೇಕಿದೆ.

ಹಚ್ಚೇವು ಕನ್ನಡದ ದೀಪ 
ಕರುನಾಡ ದೀಪ ಸಿರಿನುಡಿಯ ದೀಪ
ಒಲವೆತ್ತಿ ತೋರುವಾ ದೀಪ
ಹಚ್ಚೇವು ಕನ್ನಡದ ದೀಪ
ಡಿ.ಎಸ್.ಕರ್ಕಿಯವರ ಸಾಲುಗಳಂತೆ ಕನ್ನಡದ ದೀಪ ಎಲ್ಲರ ಮನಗಳಲ್ಲಿ ಬೆಳಗಲಿ ಎಂಬುದು ನನ್ನ ಅಭಿಲಾಷೆ.

     ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಈ ಚೆನ್ನವೀರ ಕಣವಿಯವರ ಮಾತುಗಳಂತೆ ಕೇವಲ ಕರ್ನಾಟಕ ಎಂಬ ರಾಜ್ಯ  ಇದ್ದರೆ ಸಾಲುದು ಕರ್ನಾಟಕ ರಾಜ್ಯದಲ್ಲಿ ಬದುಕುವ ಎಲ್ಲರ ಉಸಿರು, ಜೀವನ ಕನ್ನಡವಾಗಬೇಕು. ಕನ್ನಡದ ಹೋರಾಟಕ್ಕೆ ಕುವೆಂಪುರವರ ಈ ಕೆಳಕಂಡ ಸಾಲುಗಳು ಸದಾ  ಸ್ಪೂರ್ತಿದಾಯಕವಾಗಿರುತ್ತವೆ. 
ಕನ್ನಡಕ್ಕಾಗಿ ಕೈ ಎತ್ತು ಅದು ಕಲ್ಪವೃಕ್ಷವಾಗುತ್ತದೆ
ಕನ್ನಡಕ್ಕಾಗಿ ಕೊರಳೆತ್ತು ಅದು ಪಾಂಚಜನ್ಯವಾಗುತ್ತದೆ
ಕನ್ನಡಕ್ಕಾಗಿ ಕಿರುಬೆರಳೆತ್ತಿದರೂ ಸಾಕು
ಅದೇ ಗೋವರ್ಧನಗಿರಿಯಾಗುತ್ತದೆ.

ಕನ್ನಡ ನುಡಿ ನದಿಯಂತೆ ಸದಾ ಹರಿಯುತ್ತಿರಲಿ. ಕನ್ನಡ ಬಳಸಿ, ಕನ್ನಡ ಬೆಳೆಸಿ, ಕನ್ನಡ ಉಳಿಸಿ. 

- ಮಾ.ಕೃ.ಮಂಜುನಾಥ್


ಶನಿವಾರ 4 ಫೆಬ್ರವರೀ 2012

ವಿಶಿಷ್ಟವಾದ ಕನ್ನಡ ನುಡಿ ಪಂಚಾಂಗ

ನಮ್ಮ ಕನ್ನಡ ನಾಡು ನುಡಿಯನ್ನು ಬಿಂಬಿಸುವ ಕನ್ನಡ ನುಡಿ ಪಂಚಾಂಗವನ್ನು ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘ ಹೊರತಂದಿದೆ. 2012ರ ಕ್ಯಾಲೆಂಡರ್ ಕನ್ನಡ ಲಿಪಿ ಹಾಗೂ ಅಂಕಿಗಳನ್ನು ಒಳಗೊಂಡಿದೆ. ''ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ'' ಎಂಬ ಚನ್ನವೀರ ಕಣವಿಯವರ ಕವಿತೆಯ ಸಾಲು ಹಾಗೂ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಮಹಾನುಭಾವರ ಭಾವಚಿತ್ರವಿರುವ ಕನ್ನಡ ನಾಡಿನ ಭೂಪಟ  ಹೊರ ಪುಟದಲ್ಲಿರುವುದು ನಿಜಕ್ಕೂ ಈ ಕನ್ನಡದ ಪಂಚಾಂಗಕ್ಕೆ ಭೂಷಣದಂತಿದೆ. ಕನ್ನಡಿಗರಾದ ನಾವು ಕನ್ನಡವನ್ನು ಬಳಸಿ ಉಳಿಸುವ ಮಾರ್ಗಗಳಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘದ ಪ್ರಯತ್ನ ನಿಜಕ್ಕೂ ಶ್ಲಾಂಘನೀಯವಾದುದು. ಪ್ರತಿಯೊಂದು ತಿಂಗಳಿನ ಪುಟದಲ್ಲೂ  ಕನ್ನಡದ ಶ್ರೇಷ್ಟ ವ್ಯಕ್ತಿಗಳ ಭಾವಚಿತ್ರದೊಂದಿಗೆ, ಕನ್ನಡ ನಾಡನ್ನು ಕುರಿತ, ಕನ್ನಡ ಭಾಷೆಯನ್ನು ಕುರಿತ ಮಹಾನ್ ಕವಿಗಳ ಸಾಲುಗಳಿವೆ. ಪಂಚಾಂಗದ ಕೊನೆಯ ಪುಟಗಳಲ್ಲಿ ನುಡಿಮುತ್ತುಗಳ ಸಂಗ್ರಹವನ್ನು ನೀಡಲಾಗಿದೆ. ಇಂಥ ವಿಶಿಷ್ಟವಾದ ಕನ್ನಡ ನುಡಿ ಪಂಚಾಂಗವನ್ನು ಹೊರತಂದ ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘಕ್ಕೆ ಸಮಸ್ಥ ಕನ್ನಡಿಗರ ಪರವಾಗಿ ಧನ್ಯವಾದಗಳು.  ಆಂಗ್ಲ ಭಾಷೆಯ ಪ್ರಭಾವದಲ್ಲಿ ನಲುಗುತ್ತಿರುವ ಕನ್ನಡವನ್ನು ಬಳಸಿ-ಉಳಿಸಿ-ಬೆಳೆಸಿ. ||ಜೈ ಕರ್ನಾಟಕ ಮಾತೆ||
- ಮಾ.ಕೃ.ಮಂಜುನಾಥ್


























KANNADA CALENDER 2012
KANNADA CALENDER PHOTOS