ನಮ್ಮ ಕರ್ನಾಟಕ ವೈಭವಕ್ಕೆ ಸ್ವಾಗತ, ಸುಸ್ವಾಗತ

ಕನ್ನಡ ನಾಡಿನ ಅಂದವ ನೋಡ, ಸಾಹಿತ್ಯ ಸಂಸ್ಕೃತಿಯ ಕಲೆಬೀಡ, ಕನ್ನಡ ನಾಡಿನ ಅಂದವ ಸವಿಯ ಬಾರ, ನೀ ಬಂದು ಒಮ್ಮೆ ನೋಡ ಬಾರ, -(ಮಾ.ಕೃ.ಮಂಜು) ಇದು ಕನ್ನಡ ನಾಡಿನ ದೇವಾಲಯಗಳು, ಪ್ರಸಿದ್ಧ ಸ್ಥಳಗಳನ್ನು ಪರಿಚಯಿಸುವ ತಾಣ. ಕರ್ನಾಟಕದ ವೈಭವವನ್ನು ಜಗತ್ತಿಗೆ ಪರಿಚಯಿಸುವ ಪುಟ್ಟ ಪ್ರಯತ್ನ.
ಬಂಧುಗಳೇ ನಿಮ್ಮ ಊರಿನ ಪ್ರಸಿದ್ಧವಾದ ಸ್ಥಳಗಳ, ದೇವಾಲಯಗಳ ಪೋಟೋಗಳನ್ನು/ಮಾಹಿತಿಗಳನ್ನು "ನಮ್ಮ ಕರ್ನಾಟಕ ವೈಭವ"ದಲ್ಲಿ ಮೂಡಿಬರಬೇಕೇ ಹಾಗಿದ್ದರೆ ನನಗೆ ಮೇಲ್ ಕಳುಹಿಸಿಕೊಡಿ.
ನನ್ನ ಮೇಲ್ : makrumanju@gmail.com

Saturday, February 4, 2012

ವಿಶಿಷ್ಟವಾದ ಕನ್ನಡ ನುಡಿ ಪಂಚಾಂಗ

ನಮ್ಮ ಕನ್ನಡ ನಾಡು ನುಡಿಯನ್ನು ಬಿಂಬಿಸುವ ಕನ್ನಡ ನುಡಿ ಪಂಚಾಂಗವನ್ನು ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘ ಹೊರತಂದಿದೆ. 2012ರ ಕ್ಯಾಲೆಂಡರ್ ಕನ್ನಡ ಲಿಪಿ ಹಾಗೂ ಅಂಕಿಗಳನ್ನು ಒಳಗೊಂಡಿದೆ. ''ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ'' ಎಂಬ ಚನ್ನವೀರ ಕಣವಿಯವರ ಕವಿತೆಯ ಸಾಲು ಹಾಗೂ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಯನ್ನು ತಂದುಕೊಟ್ಟ ಮಹಾನುಭಾವರ ಭಾವಚಿತ್ರವಿರುವ ಕನ್ನಡ ನಾಡಿನ ಭೂಪಟ  ಹೊರ ಪುಟದಲ್ಲಿರುವುದು ನಿಜಕ್ಕೂ ಈ ಕನ್ನಡದ ಪಂಚಾಂಗಕ್ಕೆ ಭೂಷಣದಂತಿದೆ. ಕನ್ನಡಿಗರಾದ ನಾವು ಕನ್ನಡವನ್ನು ಬಳಸಿ ಉಳಿಸುವ ಮಾರ್ಗಗಳಲ್ಲಿ ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘದ ಪ್ರಯತ್ನ ನಿಜಕ್ಕೂ ಶ್ಲಾಂಘನೀಯವಾದುದು. ಪ್ರತಿಯೊಂದು ತಿಂಗಳಿನ ಪುಟದಲ್ಲೂ  ಕನ್ನಡದ ಶ್ರೇಷ್ಟ ವ್ಯಕ್ತಿಗಳ ಭಾವಚಿತ್ರದೊಂದಿಗೆ, ಕನ್ನಡ ನಾಡನ್ನು ಕುರಿತ, ಕನ್ನಡ ಭಾಷೆಯನ್ನು ಕುರಿತ ಮಹಾನ್ ಕವಿಗಳ ಸಾಲುಗಳಿವೆ. ಪಂಚಾಂಗದ ಕೊನೆಯ ಪುಟಗಳಲ್ಲಿ ನುಡಿಮುತ್ತುಗಳ ಸಂಗ್ರಹವನ್ನು ನೀಡಲಾಗಿದೆ. ಇಂಥ ವಿಶಿಷ್ಟವಾದ ಕನ್ನಡ ನುಡಿ ಪಂಚಾಂಗವನ್ನು ಹೊರತಂದ ಕರ್ನಾಟಕ ಸರ್ಕಾರ ಸಚಿವಾಲಯದ ನೌಕರರ ಸಂಘಕ್ಕೆ ಸಮಸ್ಥ ಕನ್ನಡಿಗರ ಪರವಾಗಿ ಧನ್ಯವಾದಗಳು.  ಆಂಗ್ಲ ಭಾಷೆಯ ಪ್ರಭಾವದಲ್ಲಿ ನಲುಗುತ್ತಿರುವ ಕನ್ನಡವನ್ನು ಬಳಸಿ-ಉಳಿಸಿ-ಬೆಳೆಸಿ. ||ಜೈ ಕರ್ನಾಟಕ ಮಾತೆ||
- ಮಾ.ಕೃ.ಮಂಜುನಾಥ್


KANNADA CALENDER 2012
KANNADA CALENDER PHOTOS

1 comment:

  1. ಸಿ.ಎಸ.ತಾಳಿಕೋಟಿಮಠ. ಶಿಕ್ಷಣ ಇಲಾಖೆ. ಬ್ಯೆಲಹೊ೦ಗಲMarch 29, 2012

    ಆತ್ಮೀಯ ನೌಕರ ಭಾ೦ಧವರೇ...
    ಕನ್ನಡ ನಾಡ ನುಡಿಗೆ ತಮ್ಮ ಕಾಣಿಕೆ ಅಮೂಲ್ಯವಾದದ್ದು ತು೦ಬಾ ಧನ್ಯವಾದಗಳು.
    ಕನ್ನಡ೦,ಬಾಳ್ಗೆ, ಕನ್ನಡ೦ ಗೆಲ್ಗೆ,

    ReplyDelete