ನಮ್ಮ ಕರ್ನಾಟಕ ವೈಭವಕ್ಕೆ ಸ್ವಾಗತ, ಸುಸ್ವಾಗತ

ಕನ್ನಡ ನಾಡಿನ ಅಂದವ ನೋಡ, ಸಾಹಿತ್ಯ ಸಂಸ್ಕೃತಿಯ ಕಲೆಬೀಡ, ಕನ್ನಡ ನಾಡಿನ ಅಂದವ ಸವಿಯ ಬಾರ, ನೀ ಬಂದು ಒಮ್ಮೆ ನೋಡ ಬಾರ, -(ಮಾ.ಕೃ.ಮಂಜು) ಇದು ಕನ್ನಡ ನಾಡಿನ ದೇವಾಲಯಗಳು, ಪ್ರಸಿದ್ಧ ಸ್ಥಳಗಳನ್ನು ಪರಿಚಯಿಸುವ ತಾಣ. ಕರ್ನಾಟಕದ ವೈಭವವನ್ನು ಜಗತ್ತಿಗೆ ಪರಿಚಯಿಸುವ ಪುಟ್ಟ ಪ್ರಯತ್ನ.
ಬಂಧುಗಳೇ ನಿಮ್ಮ ಊರಿನ ಪ್ರಸಿದ್ಧವಾದ ಸ್ಥಳಗಳ, ದೇವಾಲಯಗಳ ಪೋಟೋಗಳನ್ನು/ಮಾಹಿತಿಗಳನ್ನು "ನಮ್ಮ ಕರ್ನಾಟಕ ವೈಭವ"ದಲ್ಲಿ ಮೂಡಿಬರಬೇಕೇ ಹಾಗಿದ್ದರೆ ನನಗೆ ಮೇಲ್ ಕಳುಹಿಸಿಕೊಡಿ.
ನನ್ನ ಮೇಲ್ : makrumanju@gmail.com

Saturday, November 10, 2012

♥ ♥ ♥ ವಿವಿದ ಜಿಲ್ಲೆಗಳ ತಿನಿಸುಗಳು ♥ ♥ ♥

ಅಖಂಡವಾಗಿಯೇ ಬಲವಿಲ್ಲ, ಹೋಳಾದರೆ ಉಳಿವುಂಟೆ?


         ಭಾಷೆಗಿರುವ ಶಕ್ತಿಯೇ ಅಂತಹದು. ಭಾರತದಲ್ಲಿರುವ ಸುಮಾರು ಮೂವತ್ತಕ್ಕೂ ಹೆಚ್ಚು ಪ್ರಾದೇಶಿಕ ಭಾಷೆಗಳು ಕೇವಲ ಸಂವಹನ ಮಾಧ್ಯಮವಾಗಿ ಮಾತ್ರ ಉಳಿದಿಲ್ಲ. ಜನರ ಬದುಕಿನ, ಸಂಸ್ಕೃತಿಯ ಜೀವಾಳವಾಗಿ ಭಾಷೆಗಳು ಬೆರೆತುಹೋಗಿವೆ. ಭಾಷೆಯ ಜೊತೆಗೆ ನೆಲ, ಜಲಗಳು ಕೂಡ ಕೇವಲ ನಮ್ಮ ಬದುಕಿನ ಅವಶ್ಯಕತೆ ಎನಿಸದೆ ಅದಕ್ಕೂ ಮಿಗಿಲಾದ ಸ್ಥಾನವನ್ನು ಗಿಟ್ಟಿಸಿಕೊಂಡಿದೆ, ಭಾವ ಪ್ರಪಂಚದಲ್ಲಿ ಸೇರಿಹೋಗಿದೆ. ಇದ್ಯಾವುದಕ್ಕೇ ಧಕ್ಕೆ ಎನಿಸಿದರೂ ಜನ ಪ್ರತಿಭಟಿಸುತ್ತಾರೆ, ಚಳುವಳಿಗೆ ಇಳಿಯುತ್ತಾರೆ. ಇತಿಹಾಸದ ಅರಿವಿದ್ದವರಿಗೆ, ಈ ಹಿಂದೆ ನೆಲ,ಜಲ, ಭಾಷೆಯ ವಿಷಯವಾಗಿ ಆಗಿಹೋದ ಅನೇಕ ಚಳುವಳಿಗಳು, ಹೋರಾಟಗಳು, ಪ್ರಾಣಾರ್ಪಣೆಗಳು ನೆನಪಿಗೆ ಬರಬಹುದು.
         ಅದು 1905, ಅಮೇರಿಕದ ಇತಿಹಾಸಕಾರ ವಿಲ್ ಡ್ಯೂರಂಟ್ ಯಾವ ಚಳುವಳಿಯನ್ನು ’ಭಾರತ ಸ್ವಾತಂತ್ರ್ಯ ಹೋರಾಟದ ಶಂಖನಾದ’ ಎಂದು ಉದ್ಗರಿಸಿದರೋ ಆ ’ವಂಗ-ಭಂಗ’ ಚಳುವಳಿ ಪ್ರಾರಂಭವಾದ ವರ್ಷ. ಸತತ ಆರು ವರ್ಷಗಳು ನಡೆದ ಈ ಚಳುವಳಿಗೆ ಕಾರಣವಾದದ್ದು ಬಂಗಾಲದ ವಿಭಜನೆ. ದೇಶದಾದ್ಯಂತ ನಡೆಯುತ್ತಿದ್ದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಹೊಸ ಹುರುಪು,ವೇಗ, ತೀವ್ರತೆಯನ್ನು ತಂದು ಕೊಟ್ಟ ಅತಿದೊಡ್ಡ ಚಳುವಳಿ ಎಂದರೆ ಅದು ’ವಂಗ-ಭಂಗ’ ಚಳುವಳಿ. ಗುಪ್ತವಾಗಿ ನಡೆಯುತ್ತಿದ್ದ ಬಂಗಾಲದ ವಿಭಜನೆಯ ಪೂರ್ವಸಿದ್ದತೆಗಳನ್ನು ಇಂಗ್ಲೇಂಡಿನ ಸ್ಟಾಂಡರ್ಡ್ ಪತ್ರಿಕೆ ಪ್ರಕಟಿಸಿದಾಗ, ಬಂಗಾಲದ ಜನ ಸಿಟ್ಟಿಗೆದ್ದರು. ಲಾರ್ಡ್ ಕರ್ಜನ್ ವಿಭಜನೆಯ ಘೋಷಣೆ ಮಾಡಿದಾಗ, ಇಡೀ ಬಂಗಾಲ ಸ್ವದೇಶಿ ಚಳುವಳಿಗೆ ಇಳಿಯಿತು. ಮಹಾರಾಜ ಮಣೀಂದ್ರಚಂದ್ರ ನಂದಿ, ಅಂಬಿಕಾ ಚರಣ್ ಮಜುಂದಾರ್, ಬಿಪಿನ್ ಚಂದ್ರಪಾಲ್, ಸುರೇಂದ್ರನಾಥ ಬ್ಯಾನರ್ಜಿ ಹೋರಾಟದ ಸಾರಥ್ಯ ವಹಿಸಿದರು. ರವೀಂದ್ರನಾಥ ಠಾಗೂರ್, ಅಶ್ವಿನಿ ಕುಮಾರ್ ದತ್, ಅರವಿಂದರು ಸೇರಿಕೊಂಡರು.
          ಬಂಗಾಲ ದೊಡ್ಡರಾಜ್ಯ, ಒರ್ವ ಗೌರ್ನರ್ ರಿಂದ ಆಡಳಿತ ಕಷ್ಟ, ಆಡಳಿತದ ಅನುಕೂಲಕ್ಕಾಗಿ, ಸುಮಾರು ಏಳು ಕೋಟಿ ಜನಸಂಖ್ಯೆಯ ರಾಜ್ಯವನ್ನು ಪೂರ್ವ ಮತ್ತು ಪಶ್ಚಿಮ ಬಂಗಾಲವಾಗಿ ತುಂಡುಮಾಡದೇ ವಿಧಿಯಿಲ್ಲ ಎಂದು ವಿಭಜನೆಗೆ ಕರ್ಜನ್ ಸಬೂಬು ಹೇಳಿದ. ಆದರೆ ಉದ್ದೇಶ, ಪೂರ್ವ ಬಂಗಾಲವನ್ನು ಅಸ್ಸಾಂ ಜೊತೆ ಸೇರಿಸಿ, ಮುಸಲ್ಮಾನ ಬಹುಸಂಖ್ಯಾತ ಪ್ರದೇಶದಲ್ಲಿ ಧರ್ಮದ ದೃಷ್ಟಿಯಿಂದ ಬಂಗಾಲಿಗಳನ್ನು ಅಲ್ಪಸಂಖ್ಯಾತರನ್ನಾಗಿಸುವುದು, ಪಶ್ಚಿಮ ಬಂಗಾಲವನ್ನು ಬಿಹಾರ್ ಮತ್ತು ಒರಿಸ್ಸಾ ಜೊತೆ ಸೇರಿಸಿ ಭಾಷೆಯ ದೃಷ್ಟಿಯಿಂದ ಅಲ್ಪಸಂಖ್ಯಾತರನ್ನಾಗಿಸಿ ಬಂಗಾಲಿಗರ ಅಂತಃಸತ್ವವನ್ನು ಕೊಲ್ಲುವುದಾಗಿತ್ತು. ಅಖಂಡ ಬಂಗಾಲದ ಉಳಿವಿಗೆ ಹೋರಾಟ ಪ್ರಾರಂಭವಾದವು, ಅಸಹಕಾರ, ಸ್ವದೇಶಿ ಚಳುವಳಿಗಳು ಬ್ರಿಟೀಷರಿಗೆ ಬಿಸಿಮುಟ್ಟಿಸಿದವು. ಪರಿಣಾಮವಾಗಿ  ಬಂಗಾಲ ಅಖಂಡವಾಗಿ ಉಳಿಯುವಂತಾಯಿತು.
          ವಂಗ-ಭಂಗ ಚಳುವಳಿಯನ್ನೇಕೆ ಈ ಸಂದರ್ಭದಲ್ಲಿ ನೆನಪು ಮಾಡಿಕೊಳ್ಳಬೇಕೆಂದರೆ, ಈ ಹೋರಾಟ ಇತಿಹಾಸದಲ್ಲಿ ಅಚ್ಚಳಿಯದೆ ಉಳಿದದ್ದು ಮಾತ್ರವಲ್ಲ. ಕರ್ನಾಟಕ ಏಕೀಕರಣ ಚಳುವಳಿಯಂತಹ ಅನೇಕ ಹೋರಾಟಗಳಿಗೆ ಸ್ಪೂರ್ತಿಯಾಗಿ, ಮಾದರಿಯಾಗಿ ನಿಂತಿತು. ಜನ ಮಾತೃಭಾಷೆ ಮತ್ತು ತಾಯ್ನಾಡಿನ ಅಖಂಡತೆಗೆ ಹೇಗೆ ಸ್ಪಂದಿಸುತ್ತಾರೆ ಎನ್ನುವುದನ್ನು ಜಗತ್ತಿಗೆ ಸಾರಿತು. ದಕ್ಷಿಣ ಭಾರತದಲ್ಲಿ ಭಾಷಾವಾರು ರಾಜ್ಯ ರಚನೆಗಳಾಗಬೇಕೆಂಬ ಮಾತು ಬಂದಾಗ, ಮೈಸೂರು ಸಂಸ್ಥಾನ, ಹೈದರಾಬಾದ್ ಸಂಸ್ಥಾನ, ಕೊಡಗು, ಬಾಂಬೆ ಕರ್ನಾಟಕ, ಮದರಾಸು ಕರ್ನಾಟಕ ಎಂದು ಹಂಚಿಹೋಗಿದ್ದ ಕನ್ನಡ ಜನವಸತಿ ಪ್ರದೇಶಗಳು ಒಟ್ಟಾಗಿ ಅಖಂಡ ಕರ್ನಾಟಕ ರೂಪುಗೊಳ್ಳಬೇಕೆಂದು ಕನಸುಕಂಡವರು ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯರು. ನಂತರ ರಾ.ಹ ದೇಶಪಾಂಡೆಯವರ ಮುಂದಾಳತ್ವದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ರೂಪುಗೊಂಡಿತು. ಕನ್ನಡ ಸಾಹಿತ್ಯ ಪರಿಷತ್ ರಚನೆಯಾಗಿ ಕನ್ನಡದ ಕವಿಗಳು, ಲೇಖಕರಿಂದ ಏಕೀಕರಣಕ್ಕೆ ಒಕ್ಕೊರಲ ಧ್ವನಿಬಂತು.1924ರ ಬೆಳಗಾವಿ ಅಧಿವೇಶನದಲ್ಲಿ ಮಹತ್ಮಾ ಗಾಂಧೀಯವರ ಸಮ್ಮುಖದಲ್ಲಿ ಏಕೀಕರಣದ ಕಹಳೆ ಮೊಳಗಿತು. ಹುಯಿಲಗೋಳ ನಾರಾಯಣರಾಯರ ’ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಗೀತೆಗೆ ಎಲ್ಲರ ಧನಿ ಜೊತೆಯಾಯಿತು.
         ಏಕೀಕರಣಕ್ಕೆ ಅಪಸ್ವರಗಳೂ ಇದ್ದವು. ಕಾರಣವನ್ನು ಎಸ್.ಎಚ್ ಪಾಟೀಲರು ’Community Dominance and Political Modernization’ ಎಂಬ ಕೃತಿಯಲ್ಲಿ ವಿವರಿಸುತ್ತಾರೆ. ಮುಖ್ಯವಾಗಿ ಮೈಸೂರು ಪ್ರಾಂತ್ಯದ ನಾಯಕರಲ್ಲಿ ಏಕೀಕರಣಕ್ಕೆ ಒಲವಿರಲಿಲ್ಲ. ಕಾರಣ, ರಾಜಕಾರಣದಲ್ಲಿ ಒಕ್ಕಲಿಗರ ಹಿಡಿತ ತಪ್ಪಿಹೋಗುತ್ತದೆಂಬ ಆತಂಕ ಒಂದಾದರೆ, ಮೈಸೂರು ಹೊರತು ಪಡಿಸಿ ಇತರ ಭಾಗಗಳು ಹಿಂದುಳಿದಿದ್ದವು. ಹಾಗಾಗಿ ಏಕೀಕರಣವಾದರೆ ಮೈಸೂರಿನ ಸಂಪನ್ಮೂಲಗಳು ಇತರ ಭಾಗಗಳ ಅಭಿವೃದ್ದಿಗೇ ಹೆಚ್ಚು ವ್ಯಯವಾಗುತ್ತದೆ ಎಂಬ ಅಸೂಯೆ ಕೂಡ ಇದ್ದಿದ್ದು ನಿಜ. ಅಂದಿನ ಪ್ರಭಾವಿ ಒಕ್ಕಲಿಗ ನಾಯಕರಾದ ಹೆಚ್.ಕೆ ವೀರಣ್ಣಗೌಡರು, ಸಾಹುಕಾರ್ ಚೆನ್ನಯ್ಯ, ಕೆ.ವಿ.ಶಂಕರೇಗೌಡ ಇತ್ಯಾದಿ ನಾಯಕರು ಏಕೀಕರಣವನ್ನು ವಿರೋಧಿಸಿದ್ದರು. ಆಗ ಒಕ್ಕಲಿಗ ಸಮೂದಾಯದ ತರುಣ ನಾಯಕರಾಗಿದ್ದ ಎಸ್.ಎಂ ಕೃಷ್ಣರಿಂದ ’ಮೈಸೂರು ಕರ್ನಾಟಕಕ್ಕೆ ಸೇರಿದರೆ ರಕ್ತಪಾತವಾದೀತು’ ಎಂಬ ವೀರಾವೇಶದ ಮಾತು ಬಂದಿತ್ತು. ಏಕೀಕರಣದ ಪರನಿಂತ ಕೆಂಗಲ್ ಹನುಮಂತಯ್ಯ ತಮ್ಮವರ ಬೆಂಬಲವನ್ನೇ ಕಳೆದುಕೊಂಡು ಕಡಿದಾಳ ಮಂಜಪ್ಪನವರಿಗೆ ಗದ್ದುಗೆ ಬಿಟ್ಟುಕೊಡಬೇಕಾಯಿತು. 1946ರ ದಾವಣಗೆರೆ ಸಭೆಯಲ್ಲಿ ಕೊ.ಚೆನ್ನಬಸಪ್ಪನವರು ’ಸಾಧ್ಯವಾದರೆ ಮೈಸೂರನ್ನು ಒಳಗೊಂಡು, ಅಗತ್ಯವಾದರೆ ಅದನ್ನು ಬಿಟ್ಟು ಕರ್ನಾಟಕ ಏಕೀಕರಣವಾಗಬೇಕು’ ಎಂಬ ಗೊತ್ತುವಳಿ ಮಂಡಿಸಿದರು. ಕೊನೆಗೆ ಕೆಂಗಲ್ಲರ ಏಕೀಕರಣದ ಧೃಡ ಸಂಕಲ್ಪದಿಂದ, ಇತರ ಒಕ್ಕಲಿಗ ನಾಯಕರ ಮನಪರಿವರ್ತನೆಯಾಗಿ ಎಲ್ಲರೂ ಒಕ್ಕೊರಲಿನಿಂದ ಏಕೀಕರಣಕ್ಕೆ ಬದ್ದರಾದರು. ಅನೇಕ ಹೋರಾಟ, ಸತ್ಯಾಗ್ರಹ, ರಾಜಕೀಯ ಒತ್ತಡಗಳಿಂದಾಗಿ ಕೊನೆಗೂ ಕರ್ನಾಟಕ ಏಕೀಕರಣವಾಯಿತು.
         ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿನ ಜನರ ಭಾಷಾಪ್ರೇಮ, ಪ್ರಾಣಾರ್ಪಣೆಗೂ ಸಿದ್ದರಾಗುವ ಮನಸ್ಥಿತಿ ಮತ್ತು ಅದರ ಸುತ್ತಲೇ ಹೆಣೆದುಕೊಳ್ಳುವ ರಾಜಕೀಯ ವ್ಯವಸ್ತೆಯಬಗ್ಗೆ ಆಶ್ಚರ್ಯ ವ್ಯಕ್ತಪಡಿಸುವ ಅಮೇರಿಕದ ಲೇಖಕಿ ಲೀಸಾ ಮೈಕೆಲ್, ಭಾರತಕ್ಕೆ ಬಂದು ಅಧ್ಯಯನ ನೆಡೆಸಿ, ’Language, Emotions and Politics in South India’ ಎಂಬ ಹೊತ್ತಿಗೆಯನ್ನೇ ತಂದಿದ್ದಾರೆ. ಕರ್ನಾಟಕ ಏಕೀಕರಣ ಚಳುವಳಿಯಂತೆಯೇ, ತೆಲುಗು ರಾಜ್ಯಕ್ಕೆ ಬೇಡಿಕೆಯಿಟ್ಟು, ಅಮರಣಾಂತ ಉಪಾವಾಸ ಕೈಗೊಂಡು ಪ್ರಾಣಾರ್ಪಣೆ ಮಾಡಿದವರು ಪೊಟ್ಟಿ ಶ್ರೀರಾಮುಲು. ಇದೇ ಮಾದರಿಯಲ್ಲೇ ಮಾತೃ ಭಾಷೆಗೆ, ಭಾಷಾವಾರು ರಾಜ್ಯವಿಂಗಡನೆಗೆ ಅನೇಕರು ಧುಮುಕಿದರು. ಬಂಗಾಲಕ್ಕಾಗಿ ನಾಲ್ಕು ಯುವಕರು ಗುಂಡಿಗೆ ಎದೆಯೊಡ್ಡಿದರು. ಪಂಜಾಬಿಗಾಗಿ ಸಂತ ಫತೇ ಸಿಂಗರು, ತಾರಾ ಸಿಂಗರು ಉಪವಾಸ ಕೂತರು. ಇದೆಲ್ಲವೂ ಹೇಗೆ ಭಾರತೀಯರು ಭಾಷೆಗೆ, ನೆಲಕ್ಕೆ ಬೆಸೆದುಕೊಂಡಿದ್ದಾರೆಂಬುದಕ್ಕೆ ನಿದರ್ಶನ.
           ರಾಜ್ಯೋತ್ಸವ ಎದುರಿಗಿದೆ, ಕರ್ನಾಟಕ ರಚನೆಯಾಗಿ ಐದು ದಶಕಗಳು ಕಳೆದರೂ, ಆಗಾಗ ಪ್ರತ್ಯೇಕತೆಯ ಮಾತುಗಳು ಕೇಳಿಬರುತ್ತವೆ. ಪ್ರತ್ಯೇಕ ಧ್ವಜಾರೋಹಣದ ಘಟನೆಗಳೂ ಕೆಲಬಾರಿ ನಡೆದಿವೆ. ಯಾವುದೇ ಬಂಡಾಯ ಅಥವಾ ಪ್ರತ್ಯೇಕತೆಯ ಕೂಗಿಗೆ ಮುಖ್ಯವಾಗಿ ಎರಡು ಕಾರಣಗಳಿರುತ್ತವೆ. ಒಂದು ಅಸಮಾನತೆ ಅಥವಾ ನಿರ್ಲಕ್ಷ್ಯ ಮತ್ತೊಂದು ಅಧಿಕಾರಶಾಹಿಗಳ ಸ್ವಾರ್ಥ.  ಅಸಮಾನತೆಯೆನಿಸಿ, ತಮ್ಮ ಹಿತಕಾಯಲು ಸರ್ಕಾರ ವಿಫಲವಾಗಿದೆಯೆಂದಾಗ ಕೊಡವರು ಪ್ರತ್ಯೇಕತೆ ಎನ್ನುವುದು, ಹಿಂದುಳಿದಿದೆ ಎಂಬ ಕಾರಣಕ್ಕೆ ವೈಜನಾಥ ಪಾಟೀಲರು ಹೈದರಬಾದ್ ಕರ್ನಾಟಕ ಹೊಸ ರಾಜ್ಯವಾಗಲಿ ಎಂದದ್ದು. ಕಾವೇರಿ ವಿಷಯದಲ್ಲಿ ಮಾದೇಗೌಡರು ಸಿಟ್ಟಿನಿಂದ ಕಾವೇರಿ ಜಲಾನಯನ ಪ್ರದೇಶಗಳ ಹಿತಕಾಯಲಾಗದಿದ್ದರೆ ಮಂಡ್ಯ ಬೇರೆ ರಾಜ್ಯವಾಗಲಿ ಎನ್ನುವುದರ ಹಿಂದೆ ನಮ್ಮನ್ನು ನಿರ್ಲಕ್ಷಿಸುತ್ತಿದ್ದಾರೆ ಎಂಬ ನೋವಿರುತ್ತದಷ್ಟೇ. ಹಾಗಂತ ಕರ್ನಾಟಕದಿಂದ ಬೇರೆಯಾಗುವ ತುಡಿತವಿರುವುದಿಲ್ಲ.
          ಆದರೆ ಇತ್ತೀಚಿಗಿನ ಕತ್ತಿಯವರ ಹೇಳಿಕೆ ಈ ವರ್ಗಕ್ಕೆ ಸೇರಿದ್ದಲ್ಲ. ಅದು ಗೋವಾ, ಕೊಲ್ಲಾಪುರಗಳ ಬಗೆಗಿನ ಅವರ ಮಮಕಾರ, ಸ್ವಾರ್ಥ ರಾಜಕಾರಣದ ಅಭಿವ್ಯಕ್ತಿಯೆಂದೇ ಎನಿಸುತ್ತದೆ. ಅಸಮಾನತೆಯಿಂದೇಳುವ ಪ್ರತ್ಯೇಕತೆಯ ಕೂಗಿಗೆ, ಆಡಳಿತದಲ್ಲಿ , ಅಭಿವೃದ್ದಿಯಲ್ಲಿ ಸಮಾನತೆ ತೋರುವುದು ಮದ್ದು. ಪ್ರತ್ಯೇಕತೆ ಅಧಿಕಾರಕ್ಕಾಗಿ, ಸ್ವಾರ್ಥಕ್ಕಾಗಿ, ಜಾತಿಯನ್ನು ದೃಷ್ಠಿಯಲ್ಲಿಟ್ಟುಕೊಂಡು ಎಂದಾದರೆ ಅಂತವರ ಬಾಯಿಯನ್ನು ತಡಮಾಡದೇ ಪ್ರಜ್ನಾವಂತ ಕನ್ನಡಿಗರೆಲ್ಲರೂ ಒಂದಾಗಿ ಮುಚ್ಚಿಸಬೇಕಾಗುತ್ತದೆ. ಒಬ್ಬರು ಕತ್ತಿ ಎತ್ತಿದರೆ, ಸುತ್ತಲು ನೂರಾರು ಜನ ಗುರಾಣಿ ಹಿಡಿಯುವವರಿರಬೇಕಾಗುತ್ತದೆ. ಮುಖ್ಯವಾಗಿ ವಿಭಜನೆ ಕೇವಲ ರಾಜಕೀಯ ಪ್ರಕ್ರಿಯೆಯಲ್ಲ. ಅದು ಭಾವನಾತ್ಮಕ ವಿಷಯ ಕೂಡ.
            ಒಟ್ಟಿನಲ್ಲಿ ವಿಭಜನೆಯ ಮಾತುಗಳಾಡುವ ಮುನ್ನ ಅಖಂಡ ಕರ್ನಾಟಕಕ್ಕೆ ಈಗಲಾದರೂ ಬಲವೆಷ್ಟಿದೆ ಎಂಬುದನ್ನೂ ನೋಡಬೇಕು. ಮೊನ್ನೆಯಷ್ಟೇ ಕಾವೇರಿ ವಿಷಯದಲ್ಲಿ ಕೇಂದ್ರ, ಕರ್ನಾಟಕವನ್ನು ಹೇಗೆ ನೆಡೆಸಿಕೊಂಡಿತೆಂದು ನೋಡಿದ್ದೇವೆ. ತಮಿಳುನಾಡಿಗೆ ಸಿಕ್ಕ ಮಾನ್ಯತೆ ಕರ್ನಾಟಕಕ್ಕೆ ಸಿಗಲಿಲ್ಲ. ಈಗಷ್ಟೇ ಅಲ್ಲ, ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಆಡಳಿತ ಪಕ್ಷಗಳಿದ್ದಾಗಲೂ ನಮ್ಮದು ಇದೇ ಪರಿಸ್ಥಿತಿ. ನೆರೆ ರಾಜ್ಯಗಳ ಜೊತೆ, ನೆಲ-ಜಲದ ಸಮಸ್ಯೆ ಎದುರಾದಾಗಲೆಲ್ಲಾ ಕೇಂದ್ರದ ಒಲವು ಕರ್ನಾಟಕದ ವಿರುದ್ದವೇ ಧ್ವನಿಸಿದೆ. ಕನ್ನಡಕ್ಕೆ ಶಾಸ್ತ್ರೀಯ ಸ್ಥಾನಮಾನ ಗಿಟ್ಟಿಸಲು ಎಷ್ಟೇಲ್ಲಾ ಹರತಾಳ ಮಾಡಬೇಕಾಗಿ ಬಂತು ಎಂಬುದು ಗೊತ್ತೇ ಇದೆ. ಬೆಳಗಾವಿಗಾಗಿ ನಡೆದ ಹೋರಾಟಗಳೆಷ್ಟೋ, ಕೃಷ್ಣಾ-ಕಾವೇರಿಯ ವಿಷಯದಲ್ಲಿ, ಕಾಸರಗೋಡು ಮತ್ತಿತರ ಗಡಿಪ್ರದೇಶಗಳ ಪ್ರಸ್ತಾಪ ಬಂದಾಗಲೂ ನಮ್ಮದು ಅಸಹಾಯಕತೆಯೇ. 22 ಸಂಸದರನ್ನು ಆರಿಸಿ ಕಳುಹಿಸುವ ಸಾಮರ್ಥ್ಯವಿದ್ದೂ, 6 ಕೋಟಿ ಜನರ ರಾಜ್ಯವಾಗಿದ್ದೂ ಕರ್ನಾಟಕವನ್ನು ಅಸಡ್ಡೆಯಿಂದಲೇ ನೋಡಲಾಗುತ್ತಿದೆ. ಇನ್ನು, ರಾಜ್ಯ ಹೋಳಾದರೆ ಅಷ್ಟರಮಟ್ಟಿಗೆ ನಮ್ಮ ಅಶಕ್ತತೆ ಹೆಚ್ಚುತ್ತದಷ್ಟೇ. ಕನ್ನಡಿಗರು ಉತ್ತರ, ದಕ್ಷಿಣ,ಕರಾವಳಿಯೆನ್ನದೆ, ಕೃಷ್ಣಾ – ಕಾವೇರಿಯ ಭೇದ ಮಾಡದೆ, ಕನ್ನಡ ಮತ್ತು ಕರ್ನಾಟಕಕ್ಕಾಗಿ  ಒಂದಾಗಿ ನಿಲ್ಲುವುದರಲ್ಲಿ ಈ ನೆಲದ ಅಸ್ತಿತ್ವವಿದೆ. ಅಷ್ಟಕ್ಕೂ ಅಖಂಡವಾಗಿಯೇ ಕರ್ನಾಟಕಕ್ಕೆ ಬಲವಿಲ್ಲವೆಂದ ಮೇಲೆ, ಖಂಡವಾಗಿ ತುಂಡಾದರೆ ಉಳಿವುಂಟೇ?

ಕೃಪೆ: ಅರಳೀಕಟ್ಟೆ ಬ್ಲಾಗ್

Thursday, April 12, 2012

ಜನಪದ ಲೋಕ -ರಾಮನಗರ ಜಿಲ್ಲೆ

ಎಚ್.ಎಲ್.ನಾಗೇಗೌಡರಿಂದ ರಾಮನಗರ ಬಳಿಯ ಜನಪದ ಲೋಕ 


ಮುಖ್ಯದ್ವಾರ

ಎಚ್.ಎಲ್.ನಾಗೇಗೌಡರಿಂದ ರಾಮನಗರ ಬಳಿಯ ಜನಪದ ಲೋಕ 

Friday, March 30, 2012

ಮಾಕಳಿಯ ದೇವಾಲಯಗಳು

ಮಾಕಳಿ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ
ಹಿರಿಯಮ್ಮ ದೇವಾಲಯ, ಮಾಕಳಿ

ಹಿರಿಯಮ್ಮ ದೇವಾಲಯ, ಮಾಕಳಿ 

ಹಿರಿಯಮ್ಮ ದೇವಾಲಯ, ಮಾಕಳಿ 
ಹಿರಿಯಮ್ಮ ದೇವಾಲಯ, ಮಾಕಳಿ


ಶ್ರೀ ಗೋಪಾಲಕೃಷ್ಣ ದೇವಾಲಯ, ಮಾಕಳಿ

ಶ್ರೀ ಗೋಪಾಲಕೃಷ್ಣ ದೇವಾಲಯ, ಮಾಕಳಿ
ಶ್ರೀ ಗೋಪಾಲಕೃಷ್ಣ ದೇವಾಲಯ, ಮಾಕಳಿ


ಮುತ್ತಲಮ್ಮ ಗುಡಿ, ಮಾಕಳಿ

ಮುತ್ತಲಮ್ಮ ಗುಡಿ, ಮಾಕಳಿ
ಶ್ರೀ ಭಲ್ಲೇಲಿಂಗೇಶ್ವರ ದೇವಾಲಯ, ಮಾಕಳಿ
ಬಸವೇಶ್ವರ ಗುಡಿಬಸವೇಶ್ವರ ಗುಡಿ


ಗಂಜಿ ಮಂಟಪ, ಹಿಂದಿನ ಕಾಲದಲ್ಲಿ ಹಸಿದು ಬಂದವರಿಗೆ ಗಂಜಿ ನೀಡುತ್ತಿದ್ದ ಕೇಂದ್ರ

ತಿಮ್ಮಪ್ಪ ದೇವಸ್ಥಾನ, ಮಾಕಳಿ
ಶ್ರೀ ಶನಿದೇವ ದೇವಾಲಯ, ಮಾಕಳಿ

ಹನುಮ ಮೂರ್ತಿ, ತಿಮ್ಮಪ್ಪ ದೇವಸ್ಥಾನ, ಮಾಕಳಿ

ಮಾಕಳಿಯ ಭಲ್ಲೇಲಿಂಗೇಶ್ವರ ದೇವಾಲಯ

 ಮಾಕಳಿಯ ಭಲ್ಲೇಲಿಂಗೇಶ್ವರ ದೇವಾಲಯ, ಮಾಕಳಿ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ


 ಮಾಕಳಿಯ ಭಲ್ಲೇಲಿಂಗೇಶ್ವರ ದೇವಾಲಯ, ಮಾಕಳಿ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ

ಮಾಕಳಿಯ ಹಿರಿಯಮ್ಮ ದೇವಾಲಯ

ಹಿರಿಯಮ್ಮ ದೇವಸ್ಥಾನ, ಮಾಕಳಿ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ
ಹಿರಿಯಮ್ಮ ದೇವಸ್ಥಾನ, ಮಾಕಳಿ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ

ಹಿರಿಯಮ್ಮ ದೇವಸ್ಥಾನದ ಪಕ್ಕದಲ್ಲಿನ ಕಲ್ಲಿನ ಮಂಟಪ, ಮಾಕಳಿ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ


ಹಿರಿಯಮ್ಮ ದೇವಸ್ಥಾನದ ಕಲ್ಯಾಣಿ, ಮಾಕಳಿ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ

ಹಿರಿಯಮ್ಮ ದೇವಸ್ಥಾನ, ಮಾಕಳಿ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆಹಿರಿಯಮ್ಮ ದೇವಸ್ಥಾನದ ದ್ವಾರಪಾಲಕ, ಮಾಕಳಿ, ಚನ್ನಪಟ್ಟಣ ತಾಲ್ಲೂಕು, ರಾಮನಗರ ಜಿಲ್ಲೆ

Friday, March 23, 2012

ಯುಗ-ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ

ಯುಗ-ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ...ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರಲ್ಲಿ...ಬೇವಿನ ಕಹಿ ಬಾಳಿನಲ್ಲಿ ಹೂವಿನ ನಸುಗಂಪು ಸೂಸಿ ಜೀವಕಳೆಯ ತರಲ್ಲಿ.
 ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು... 
 
 

Thursday, March 22, 2012

ಪಂಚಮುಖಿ ಗಣಪತಿ ದೇವಾಲಯ, ಕೆಂಗೇರಿ

ಪಂಚಮುಖಿ ಗಣಪತಿ ದೇವಾಲಯ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠ, ಮೈಸೂರು ರಸ್ತೆ. ಕೆಂಗೇರಿ.