ನಮ್ಮ ಕರ್ನಾಟಕ ವೈಭವಕ್ಕೆ ಸ್ವಾಗತ, ಸುಸ್ವಾಗತ

ಕನ್ನಡ ನಾಡಿನ ಅಂದವ ನೋಡ, ಸಾಹಿತ್ಯ ಸಂಸ್ಕೃತಿಯ ಕಲೆಬೀಡ, ಕನ್ನಡ ನಾಡಿನ ಅಂದವ ಸವಿಯ ಬಾರ, ನೀ ಬಂದು ಒಮ್ಮೆ ನೋಡ ಬಾರ, -(ಮಾ.ಕೃ.ಮಂಜು) ಇದು ಕನ್ನಡ ನಾಡಿನ ದೇವಾಲಯಗಳು, ಪ್ರಸಿದ್ಧ ಸ್ಥಳಗಳನ್ನು ಪರಿಚಯಿಸುವ ತಾಣ. ಕರ್ನಾಟಕದ ವೈಭವವನ್ನು ಜಗತ್ತಿಗೆ ಪರಿಚಯಿಸುವ ಪುಟ್ಟ ಪ್ರಯತ್ನ.
ಬಂಧುಗಳೇ ನಿಮ್ಮ ಊರಿನ ಪ್ರಸಿದ್ಧವಾದ ಸ್ಥಳಗಳ, ದೇವಾಲಯಗಳ ಪೋಟೋಗಳನ್ನು/ಮಾಹಿತಿಗಳನ್ನು "ನಮ್ಮ ಕರ್ನಾಟಕ ವೈಭವ"ದಲ್ಲಿ ಮೂಡಿಬರಬೇಕೇ ಹಾಗಿದ್ದರೆ ನನಗೆ ಮೇಲ್ ಕಳುಹಿಸಿಕೊಡಿ.
ನನ್ನ ಮೇಲ್ : makrumanju@gmail.com

Monday, March 21, 2011

ಹಾರನಹಳ್ಳಿಯ ಹೊಯ್ಸಳರ ದೇವಾಲಯಗಳು

ಅರಸಿಕೆರೆ ತಾಲ್ಲೂಕಿನ ಹಾರನಹಳ್ಳಿಯ ಹೊಯ್ಸಳರ ದೇವಾಲಯಗಳು
 
ಕೇಶವ ದೇವಾಲಯ
 
ಸೋಮೇಶ್ವರ ದೇವಾಲಯ ಮಹದೇವ ದೇವಾಲಯ, ಇಟ್ಟಗಿ


ಮಹದೇವ ದೇವಾಲಯ, ಇಟ್ಟಗಿ
Itagi Mahadeva temple Light

Sunday, March 20, 2011

Saturday, March 19, 2011

ಬಿಜಾಪುರದ ಇಬ್ರಾಹಿಂ ರೋಜಾ

ವಿಜಾಪುರ (ಆಂಗ್ಲ: ಬಿಜಾಪುರ) ಕರ್ನಾಟಕ ರಾಜ್ಯದ ಒಂದು ಜಿಲ್ಲೆ. ಈ ಜಿಲ್ಲೆಯ ಜಿಲ್ಲಾಡಾಳಿತ ಮತ್ತು ಪ್ರಮುಖ ನಗರ ವಿಜಾಪುರ. ಬಿಜಾಪುರ ನಗರ ಬೆಂಗಳೂರಿನಿಂದ ಉತ್ತರಪಶ್ಚಿಮಕ್ಕೆ ೫೩೦ ಕಿಮೀ ದೂರದಲ್ಲಿದೆ. ಈ ಜಿಲ್ಲೆಯಲ್ಲಿ ೫ ನದಿಗಳು ಹರಿಯುವದರಿಂದ ಇದಕ್ಕೆ ಪಂಚನದಿಗಳ ಬೀಡು, ಆದರೂ ಅತಿ ಕಡಿಮೆ ಮಳೆ, ಒಣ ಹವೆ,ನೀರಾವರಿ ಸವಲತ್ತುಗಳಿಲ್ಲದ ಕಾರಣ ಯಾವತ್ತೂ ನೀರಿನ ಅಭಾವ ಇದ್ದೇ ಇದೆ. 
 
ಬಿಜಾಪುರದ ಇಬ್ರಾಹಿಂ ರೋಜಾ

ಇಬ್ರಾಹಿಮ್ ರೌಜಾ: ಇದು ಇಬ್ರಾಹಿಮ್ ಆದಿಲ್ ಶಾ (ಆಳ್ವಿಕೆ: ೧೫೮೦-೧೬೨೭) ನ ಗೋರಿ. ಒಂದೇ ಶಿಲೆಯಲ್ಲಿ ಕಟ್ಟಲ್ಪಟ್ಟ ರೌಜಾ ತನ್ನ ಉದ್ದಳತೆಯ ಸಮರೂಪತೆಗೆ ಹೆಸರಾಗಿದೆ. ಇದರ ಶಿಲ್ಪಿ ಮಲಿಕ್ ಸಂದಾಲ್ ಇರಾನ್ ದೇಶದವನಾಗಿದ್ದು, ಶಿಲ್ಪಿಯ ಗೋರಿಯೂ ಸಹ ಇಲ್ಲಿಯೇ ಇದೆ. ಇದರ ವಿನ್ಯಾಸ ಮುಂದೆ ಪ್ರಸಿದ್ಧ ತಾಜ್ ಮಹಲ್ ನ ವಿನ್ಯಾಸಕ್ಕೆ ಸ್ಫೂರ್ತಿಯಾಯಿತೆಂಬ ಹೇಳಿಕೆಯಿದೆ.

ಬೇಲೂರು

ಬೇಲೂರು, ಹಾಸನ ಜಿಲ್ಲೆ


ಬೇಲೂರು
Belur _Karnataka

ಬೇಲೂರಿನ ಶಿಲಾಬಾಲಿಕೆ
ಚನ್ನಕೇಶವ ದೇವಾಲಯ, ಬೇಲೂರು

ಚನ್ನಕೇಶವ ದೇವಾಲಯ, ಬೇಲೂರು

Saturday, March 12, 2011

ಉಡುಪಿಯ ಶ್ರೀಕೃಷ್ಣ

ಉಡುಪಿ ಕೃಷ್ಣ


ಇದು ಉಡುಪಿಯ ಕೃಷ್ಣನ ಒಂದು ಅಲಂಕಾರದ ಚಿತ್ರ. ಈಗ ಶಿರೂರು ಮಠದ ಪರ್ಯಾಯದ ಅವಧಿ. ಹಾಗಾಗಿ ಕೃಷ್ಣನಿಗೆ ಮಹಾಪೂಜೆ ಸಲ್ಲಿಸುವ ಮೊದಲ ಹಕ್ಕು ಶಿರೂರು ಮಠದ ಸ್ವಾಮಿಗಳಿಗೆ ಮಾತ್ರ. ಈ ಮಹಾಪೂಜೆಯನ್ನೂ ಸೇರಿಸಿ ಕೃಷ್ಣನಿಗೆ ದಿನಾಲೂ ೧೬ ಪೂಜೆಗಳಿವೆ. ಉಳಿದ ಮಠದ ಸ್ವಾಮಿಗಳು ಮಹಾಪೂಜೆಯೊಂದನ್ನು ಬಿಟ್ಟು ಇತರ ೧೫ ಪೂಜೆಗಳಲ್ಲಿ ಯಾವುದನ್ನಾದರೂ ಸಲ್ಲಿಸಬಹುದು. ತಮ್ಮ ಪರ್ಯಾಯವಲ್ಲದ ಸಮಯದಲ್ಲಿ ಇತರ ಮಠದ ಸ್ವಾಮಿಗಳು ಪೂಜೆ ಸಲ್ಲಿಸಲೇಬೇಕೆಂಬ ಯಾವ ನಿಯಮವೂ ಇಲ್ಲ. ಪೂಜೆ ಸಲ್ಲಿಸುವುದು ಅವರವರ ಇಷ್ಟ. ಪೂಜೆಯನ್ನು ಸಲ್ಲಿಸುವಲ್ಲಿ ಹಿರಿಯ ಸ್ವಾಮಿಗಳಿಗೆ ಆದ್ಯತೆ ನೀಡಲಾಗುತ್ತದೆ. ಇತರ ಮಠಗಳ ಸ್ವಾಮಿಗಳು ಪೂಜೆ ಸಲ್ಲಿಸಿದ ಬಳಿಕ ನಂತರ ಉಳಿದ ಇತರ ಪೂಜೆಗಳನ್ನು ಪರ್ಯಾಯ ಮಠದ ಸ್ವಾಮಿಯವರು ಸಲ್ಲಿಸುತ್ತಾರೆ. ಒಂದು ವೇಳೆ ಆ ದಿನ ಉಳಿದ ೭ ಮಠಗಳ ಸ್ವಾಮಿಗಳು ಯಾವುದೇ ಪೂಜೆ ಸಲ್ಲಿಸದೇ ಇದ್ದಲ್ಲಿ, ಪರ್ಯಾಯ ಮಠದ ಸ್ವಾಮಿಗಳೇ ದಿನದ ಎಲ್ಲಾ ಪೂಜೆಗಳನ್ನೂ ಸಲ್ಲಿಸಬೇಕು.

ಕೃಷ್ಣನಿಗೆ ಹಲವಾರು ಅಲಂಕಾರಗಳಿವೆ. ೪೦೦ ವರ್ಷಗಳ ಮೊದಲು ವಾದಿರಾಜ ಸ್ವಾಮಿಗಳು ಕೃಷ್ಣನಿಗೆ ೪೦೦ ಅಲಂಕಾರಗಳನ್ನು ಮಾಡಿದ್ದು ಇದುವರೆಗಿನ ದಾಖಲೆ. ಈ ವಾದಿರಾಜ ಸ್ವಾಮಿಗಳೇ ಪರ್ಯಾಯದ ಅವಧಿಯನ್ನು ೨ ತಿಂಗಳಿನಿಂದ ೨ ವರ್ಷಕ್ಕೆ ವಿಸ್ತರಿಸಿದವರು. ಇವರ ಹೆಸರಿನಲ್ಲಿರುವ ೪೦೦ ಅಲಂಕಾರಗಳ ದಾಖಲೆಯನ್ನು ಮುರಿಯಲು ಈಗಿನ ಪರ್ಯಾಯ ಸ್ವಾಮಿಗಳಿಗೆ ಮುಜುಗರ. ತಾನು ವಾದಿರಾಜ ಸ್ವಾಮಿಗಳಷ್ಟು ಪಾಂಡಿತ್ಯ ಗಳಿಸಿಲ್ಲ, ಅವರ ಮಟ್ಟಕ್ಕಿನ್ನೂ ತಾನು ತಲುಪಿಲ್ಲ ಎಂಬ ಭಾವನೆ ಈ ಸ್ವಾಮಿಗಳದ್ದು. ಆದ್ದರಿಂದ ಶಿರೂರು ಸ್ವಾಮಿಗಳು ೩೬೫ ಅಲಂಕಾರಗಳನ್ನು ಮಾಡುವ ನಿರ್ಧಾರ ಮಾಡಿದ್ದಾರೆ. ಅವರ ಅಲಂಕಾರಗಳಿನ್ನೂ ಆರಂಭಗೊಂಡಿಲ್ಲ. ಕೃಷ್ಣನಿಗೆ ಈಗ ಉಳಿದ ಮಠಗಳ ಸ್ವಾಮಿಗಳು ತಾವು ಪೂಜೆ ಸಲ್ಲಿಸುವಾಗ ಅಲಂಕಾರ ಮಾಡುತ್ತಾರೆ.

ಗೆಳೆಯ ಗುರುದತ್ತ ಒಬ್ಬ ಅದ್ಭುತ ಫೋಟೋಗ್ರಾಫರ್. ಪ್ರತಿ ದಿನದ ಅಲಂಕಾರವನ್ನು ಕ್ಯಾಮರಾ ಕಣ್ಣಿನಲ್ಲಿ ಸೆರೆ ಹಿಡಿಯುವುದು ಈಗ ಗುರುದತ್ತನ ಕೆಲಸ. ಪ್ರತಿದಿನದ ಕೃಷ್ಣನ ಅಲಂಕಾರದ ಚಿತ್ರವನ್ನು ಮಧ್ಯಾಹ್ನ ೨ ಗಂಟೆಯ ಒಳಗೆ ಶಿರೂರು ಮಠದ ಅಂತರ್ಜಾಲ ತಾಣದಲ್ಲಿ ಪ್ರಕಟಿಸಿ ಆಗಿರುತ್ತದೆ.

ಈಗ ಗುರು ತನ್ನನ್ನು ಸಂಪೂರ್ಣವಾಗಿ ಕೃಷ್ಣನ ಸೇವೆಗೆ ಮುಡಿಪಾಗಿಟ್ಟಿದ್ದಾನೆ. ಚಾರಣವಿಲ್ಲ, ಬೇರೆ ಫೋಟೋಗ್ರಾಫಿ ಅಸೈನ್-ಮೆಂಟುಗಳಿಲ್ಲ, ಪ್ರೊಫೆಷನಲ್ ಶೂಟ್-ಗಳಿಲ್ಲ, ಪ್ರಕೃತಿಯ ಜೊತೆ ಒಡನಾಟವಿಲ್ಲ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಈಗ ಕೃಷ್ಣನ ಸೇವೆ ಬಿಟ್ಟು ಬೇರೇನೂ ಇಲ್ಲ! ಕೃಷ್ಣನ ಸೇವೆ ದಿನಾಲೂ ಮಾಡುವುದರಿಂದ ಕೆಲವು ಆಚರಣೆಗಳನ್ನು ಗುರು ತನ್ನ ದಿನನಿತ್ಯದ ಜೀವನದಲ್ಲಿ ಈಗ ಅಳವಡಿಸಿಕೊಳ್ಳಬೇಕಾಗಿದೆ. ಮುಂಜಾನೆ ಬಲೂ ಬೇಗ ಸ್ನಾನ, ಮಡಿ ಆಚರಣೆ, ಕೇವಲ ಸಸ್ಯಹಾರಿ ಆಹಾರ ಸೇವನೆ, ಬ್ರಹ್ಮಚಾರಿ ಜೀವನ, ಇತ್ಯಾದಿ. ದಿನಾಲೂ ಚಿತ್ರ ತೆಗೆಯಲು ಇರುವುದರಿಂದ ಮುಂದಿನ ಪರ್ಯಾಯದವರೆಗೆ ಉಡುಪಿ ಬಿಟ್ಟು ಹೋಗುವಂತಿಲ್ಲ! ಗುರುವಿನ ಡೆಡಿಕೇಶನ್ ಮೆಚ್ಚಲೇಬೇಕು. ಆದರೂ ನಮಗೆಲ್ಲ ಸಣ್ಣ ಗಾಬರಿಯೊಂದು ಆರಂಭವಾಗಿದೆ. ಎರಡು ವರ್ಷಗಳ ಕೃಷ್ಣನ ಮತ್ತು ಸ್ವಾಮಿಗಳ ಸಾಮೀಪ್ಯದ ಬಳಿಕ ತಾನು ಇನ್ನು ಸನ್ಯಾಸಿಯಾಗುತ್ತೇನೆ ಎಂದು ಈತ ಹೊರಟರೆ...!

ಶಿರೂರು ಮಠದ ಅಂತರ್ಜಾಲ ತಾಣದಲ್ಲಿ ಪ್ರತಿನಿತ್ಯ ಕೃಷ್ಣನ ಹೊಸ ಅಲಂಕಾರದ ಚಿತ್ರಗಳನ್ನು ಕಾಣಬಹುದು. ಅಲ್ಲೇ ಸ್ವಲ್ಪ ಜಾಲಾಡಿದರೆ ಉಡುಪಿ ಕೃಷ್ಣನಿಗೆ ಸಂಬಂಧಿಸಿದಂತೆ ಗುರು ತೆಗೆದ ಇನ್ನೂ ಇತರ ಚಿತ್ರಗಳನ್ನೂ ಕಾಣಬಹುದು.

ಕೃಪೆ : ರಾಜೇಶ್ ನಾಯ್ಕ್

Tuesday, March 8, 2011

ಬನವಾಸಿ ಮಧುಕೇಶ್ವರ ದೇವಾಲಯ


 
ಬನವಾಸಿ ಮಧುಕೇಶ್ವರ ದೇವಾಲಯ, ಉತ್ತರ ಕನ್ನಡ ಜಿಲ್ಲೆ, ಶಿರಸಿ ತಾಲ್ಲೂಕು
 
 


ಮಧುಕೇಶ್ವರ ದೇವಾಲಯವೇ ಬನವಾಸಿಯ ಅತ್ಯಂತ ಪ್ರೇಕ್ಷಣೀಯ ಹಾಗು ಐತಿಹಾಸಿಕ ಸ್ಥಳವಾಗಿದೆ. ಇದಲ್ಲದೆ ಸ್ವಾದಿ ಅರಸರು ಕಟ್ಟಿಸಿದ ಶಿಲಾಮಂಟಪ ವೈಶಿಷ್ಟ್ಯಪೂರ್ಣವಾಗಿದೆ. ಇಲ್ಲಿ ಉಮಾ ದೇವಿ, ಶಾಂತಲಕ್ಶ್ಮಿ ನರಸಿಂಹ ಅಲ್ಲದೆ ಇನ್ನೂ ಹಲವು ದೇವತೆಗಳ ಮೂರ್ತಿಗಳು ಕಾಣಸಿಗುವುದು. ದೇವಾಲಯದ ಗರ್ಭಗುಡಿಯ ಬಾಗಿಲಲ್ಲಿ ಪುರುಷಾಮೃಗವನ್ನು ಅಧ್ಭುತವಾಗಿ ಕೆತ್ತಲಾಗಿದೆ.
ಬನವಾಸಿಯ ಕೋಟೆ ಬಹಳ ಪುರಾತನವಾದದ್ದು. ಚಾಲುಕ್ಯ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದಲ್ಲಿ ಈ ಕೋಟೆಯ ಪ್ರಸ್ತಾಪವಿದೆ. ಸುಮಾರು ಕ್ರಿ.ಶ ೧೦೦೦ ಯ ವರ್ಷದ ಸುಮಾರಿಗೆ ಸೇರಿದ್ದಿರಬಹುದಾದ, ಚಂದ್ರವಳ್ಳಿಯಲ್ಲಿ ದೊರೆತಿರುವ ಇಟ್ಟಿಗೆಗಳಂತಹ ದೊಡ್ಡ ಚಪ್ಪಟ್ಟೆ ಇಟ್ಟಿಗೆಗಳನ್ನು ಈ ಕೋಟೆಯ ಗೋಡೆಯ ಅತೀ ಕೆಳಗಿನ ವರಸೆಗಳಲ್ಲಿ ಕಾಣಬಹುದು. ಇಟ್ಟಿಗೆಯ ಗೋಡೆಯ ಮೇಲೆ ಜಂಬಿಟ್ಟಿಗೆಯ ದಪ್ಪ ಗೋಡೆಯನ್ನು ಕಟ್ಟಲಾಗಿದೆ. ಇದು ವಿಜಯನಗರದ ಕಾಲದಲ್ಲಿ ಕಟ್ಟಲಾದದ್ದು ಎನ್ನಲಾಗಿದೆ.

Monday, March 7, 2011

ಉಡುಪಿ ಕೃಷ್ಣನ ಸೇವೆಯ ಚಿತ್ರಗಳು


ಉಡುಪಿ ಕೃಷ್ಣನ ಸೇವೆಯ ಚಿತ್ರಗಳು


ಉಡುಪಿ ಕೃಷ್ಣನ ಪ್ರತಿದಿನದ ಅಲಂಕಾರದ ಚಿತ್ರವನ್ನು ಮಧ್ಯಾಹ್ನ ೨ ಗಂಟೆಯ ಒಳಗೆ ಶಿರೂರು ಮಠದ ಅಂತರ್ಜಾಲ ತಾಣದ ಮುಖಪುಟದಲ್ಲಿಪ್ರಕಟಿಸಿಯಾಗಿರುತ್ತದೆ. ದೂರದೂರಿನ ಕೃಷ್ಣನ ಪರಮಭಕ್ತರು ಈಗ ಅಂತರ್ಜಾಲದಲ್ಲೇ ಕೃಷ್ಣನ ಪ್ರತಿದಿನದ ಅಲಂಕಾರ ಮತ್ತು ಪೂಜೆ ಇತ್ಯಾದಿಗಳ ಚಿತ್ರಗಳನ್ನು ನೋಡಿ ಸಂತುಷ್ಟರಾಗುತ್ತಿದ್ದಾರೆ. ಈಗ ಕೃಷ್ಣ ದೇವಾಲಯದಲ್ಲಿ ಪ್ರತಿದಿನ ಆಗುವ ಕಾರ್ಯಗಳ (ಪೂಜೆ, ಹರಕೆ, ರಥೋತ್ಸವ, ಏಕಾದಶಿ ವಿಶೇಷ, ಇತ್ಯಾದಿ) ಚಿತ್ರಗಳನ್ನು ಕೂಡಾ ಅದೇ ದಿನ ಶಿರೂರು ಮಠದ ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗುತ್ತಿದೆ.


ಮೊದಲು ಕೃಷ್ಣನ ಅಲಂಕಾರದ ಚಿತ್ರಗಳನ್ನು ತೆಗೆಯುತ್ತಿದ್ದ ಗೆಳೆಯ ಗುರುದತ್ತನಿಗೇ ಈಗ ಪ್ರತಿದಿನ ನಡೆಯುವ ಎಲ್ಲಾ ವಿಧಿ ವಿಧಾನಗಳ ಚಿತ್ರಗಳನ್ನು ಕೂಡಾ ತೆಗೆಯುವ ಜವಾಬ್ದಾರಿಯನ್ನು ವಹಿಸಲಾಗಿದೆ. ಪ್ರತಿದಿನದ ಕೃಷ್ಣನ ಅಲಂಕಾರದ ಚಿತ್ರವನ್ನು ಶಿರೂರು ಮಠದ ಅಂತರ್ಜಾಲ ತಾಣದ ಮುಖಪುಟದಲ್ಲೇಕಾಣಬಹುದಾದರೆ, ಆಯಾ ದಿನಗಳ ಕಾರ್ಯಕ್ರಮಗಳ ಚಿತ್ರಗಳನ್ನು ತಾಣದೊಳಗೆ ಪ್ರವೇಶಿಸಿದರೆ ಬಲಭಾಗದಲ್ಲಿರುವ ಕೊಂಡಿಗಳ ಮೂಲಕ ಕಾಣಬಹುದು. ಗುರುದತ್ ತೆಗೆದಿರುವ ಕೆಲವು ಚಿತ್ರಗಳನ್ನು ಇಲ್ಲಿ ಪ್ರಕಟಿಸಿರುವೆ. ಕೃಷ್ಣನ ಭಕ್ತರು ಇನ್ನು ಶಿರೂರು ಮಠದ ಅಂತರ್ಜಾಲ ತಾಣವನ್ನು ’ನೋಟ್’ ಮಾಡಿಟ್ಟುಕೊಳ್ಳಿರಿ. ಕಂಪ್ಯೂಟರ್ ಪರದೆಯಲ್ಲೇ ಶ್ರೀ ಕೃಷ್ಣ ದರ್ಶನ!

ಕೃಪೆ : ರಾಜೇಶ್ ನಾಯ್ಕ್

Thursday, March 3, 2011

ಚನ್ನಪಟ್ಟಣದ ಅರಮನೆಚನ್ನಪಟ್ಟಣದ ಪಾಳೇಗಾರನಾದ ಜಗದೇವರಾಯನ ಕಾಲದ ಅರಮನೆ ಎಂದು ಹೇಳುವ ಕಟ್ಟಡದ ಅವಶೇಷ ಮಾತ್ರ ಈಗ ಉಳಿದಿರುವುದು