ನಮ್ಮ ಕರ್ನಾಟಕ ವೈಭವಕ್ಕೆ ಸ್ವಾಗತ, ಸುಸ್ವಾಗತ

ಕನ್ನಡ ನಾಡಿನ ಅಂದವ ನೋಡ, ಸಾಹಿತ್ಯ ಸಂಸ್ಕೃತಿಯ ಕಲೆಬೀಡ, ಕನ್ನಡ ನಾಡಿನ ಅಂದವ ಸವಿಯ ಬಾರ, ನೀ ಬಂದು ಒಮ್ಮೆ ನೋಡ ಬಾರ, -(ಮಾ.ಕೃ.ಮಂಜು) ಇದು ಕನ್ನಡ ನಾಡಿನ ದೇವಾಲಯಗಳು, ಪ್ರಸಿದ್ಧ ಸ್ಥಳಗಳನ್ನು ಪರಿಚಯಿಸುವ ತಾಣ. ಕರ್ನಾಟಕದ ವೈಭವವನ್ನು ಜಗತ್ತಿಗೆ ಪರಿಚಯಿಸುವ ಪುಟ್ಟ ಪ್ರಯತ್ನ.
ಬಂಧುಗಳೇ ನಿಮ್ಮ ಊರಿನ ಪ್ರಸಿದ್ಧವಾದ ಸ್ಥಳಗಳ, ದೇವಾಲಯಗಳ ಪೋಟೋಗಳನ್ನು/ಮಾಹಿತಿಗಳನ್ನು "ನಮ್ಮ ಕರ್ನಾಟಕ ವೈಭವ"ದಲ್ಲಿ ಮೂಡಿಬರಬೇಕೇ ಹಾಗಿದ್ದರೆ ನನಗೆ ಮೇಲ್ ಕಳುಹಿಸಿಕೊಡಿ.
ನನ್ನ ಮೇಲ್ : makrumanju@gmail.com

Saturday, April 4, 2009

ಮೈಸೂರಿನ ಪ್ರಸಿದ್ಧ ತಾಣಗಳು

ವಿಶ್ವವಿಖ್ಯಾತ ಮೈಸೂರು


ಚಾಮುಂಡಿ ಬೆಟ್ಟ
ಏಕಶಿಲಾ ನಂದಿ

ಮೈಸೂರು ಕರ್ನಾಟಕ ರಾಜ್ಯದಲ್ಲಿರುವ ನಗರ. ಮೈಸೂರು ಅದೇ ಹೆಸರಿನ ಜಿಲ್ಲೆಯ ಆಡಳಿತ ಕೇಂದ್ರ, ಮತ್ತು ಹಿಂದಿನಮೈಸೂರು ಸಂಸ್ಥಾನದ ಹಳೆಯ ರಾಜಧಾನಿ. ಮೈಸೂರನ್ನು 'ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ' ಎಂದು ಕರೆಯಲಾಗಿದೆ. ಇಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರನ್ನು ಕೆಲವೊಮ್ಮೆ ಅರಮನೆಗಳ ನಗರ ಎಂದೂ ಕರೆಯಾಲಾಗುತ್ತದೆ.
ಮೈಸೂರು ಕರ್ನಾಟಕದ ಪ್ರಸಿದ್ಧ ಪ್ರವಾಸಿ ಆಕರ್ಷಣೆಗಳಲ್ಲಿ ಹಲವನ್ನು ಒಳಗೊಂಡಿದೆ. ಇಲ್ಲಿನ ಮುಖ್ಯ ಆಕರ್ಷಣೆಗಳಲ್ಲಿ ಕೆಲವೆಂದರೆ ಮೈಸೂರು ಅರಮನೆ, ಶ್ರೀ ಚಾಮರಾಜೇಂದ್ರ ಮೃಗಾಲಯ, ಚಾಮುಂಡಿ ಬೆಟ್ಟ, ಕಾರಂಜಿ ಕೆರೆ, ಕುಕ್ಕರಹಳ್ಳಿ ಕೆರೆ ಇತ್ಯಾದಿ.ರೀಜನಲ್ ಮ್ಯೂಜಿಯ್ಂ ಆಫ್ ನ್ಯಾಚುರಲ್ ಹಿಸ್ಟರಿ,ಜಗನ್ಮೊಹನ ಅರಮನೆ. 

ಆಕರ್ಷಣೆಗಳುಮೈಸೂರು ನಗರದಲ್ಲಿ ಅನೇಕ ಅರಮನೆಗಳಿರುವುದರಿಂದ ಮೈಸೂರಿಗೆ ಅರಮನೆಗಳ ನಗರ ಎಂದೂ ಸಹ ಹೆಸರು. ಈ ಅರಮನೆಗಳಲ್ಲಿ ಕೆಲವು:
ಮುಖ್ಯ ಮೈಸೂರು ಅರಮನೆ: ಮುಖ್ಯ ಮೈಸೂರು ಅರಮನೆ, ಅಥವಾ "ಅಂಬಾ ವಿಲಾಸ", ೧೮೯೭ ರಲ್ಲಿ ಕಟ್ಟಲಾರಂಭಿಸಿ ೧೯೧೨ ರಲ್ಲಿ ಸಿದ್ಧವಾದ ಅರಮನೆ. ಪ್ರತಿ ಭಾನುವಾರ ಸಂಜೆ ಸಾವಿರಾರು ದೀಪಗಳಿಂದ ಸುಂದರ ದೃಶ್ಯ ನೀಡುವ ಅರಮನೆ.
ರಾಜೇಂದ್ರ ವಿಲಾಸ್: ಬೇಸಿಗೆ ಅರಮನೆ ಎಂದೂ ಹೆಸರು, ಚಾಮುಂಡಿ ಬೆಟ್ಟದ ಮೇಲೆ ಇದೆ.
ಜಗನ್ಮೋಹನ ಅರಮನೆ: ಜಗನ್ಮೋಹನ ಅರಮನೆ ಈಗ ಒಂದು ಕಲಾ ಸಂಗ್ರಹಾಲಯ. ರಾಜಾ ರವಿ ವರ್ಮ ಮೊದಲಾದ ಅನೇಕ ಪ್ರಸಿದ್ಧ ಕಲಾವಿದರ ಕೃತಿಗಳನ್ನು ಇಲ್ಲಿ ಕಾಣಬಹುದು.
ಜಯಲಕ್ಷ್ಮಿ ವಿಲಾಸ್: ಈಗ ಮೈಸೂರು ವಿಶ್ವವಿದ್ಯಾಲಯದ ಮಾನಸ ಗಂಗೋತ್ರಿಯ ಆವರಣದಲ್ಲಿದೆ.
ಲಲಿತ ಮಹಲ್: ಈಗ ಭಾರತೀಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು ನಡೆಸುವ ಹೋಟೆಲ್ ಆಗಿ ಪರಿವರ್ತಿತವಾಗಿದೆ.

ಮುಖ್ಯ ಮೈಸೂರು ಅರಮನೆಯ ಉಸ್ತುವಾರಿ ಈಗ ಕರ್ನಾಟಕ ಸರ್ಕಾರದ ಕೈಯಲ್ಲಿ ಇದ್ದರೂ ಅರಮನೆಯ ಒಂದು ಭಾಗವನ್ನು ಹಿಂದಿನ ರಾಜಮನೆತನಕ್ಕೆ ಬಿಟ್ಟುಕೊಡಲಾಗಿದೆ.

ಮೈಸೂರಿನ ಪ್ರವಾಸಿ ಆಕರ್ಷಣೆಗಳಲ್ಲಿ ಇನ್ನೊಂದು ಚಾಮುಂಡಿ ಬೆಟ್ಟ. ಇದು ಇಲ್ಲಿನ ದೇವಸ್ಥಾನಗಳು (ಮುಖ್ಯವಾಗಿ ಚಾಮುಂಡೇಶ್ವರಿ ದೇವಾಲಯ), ದೊಡ್ಡ ನಂದಿಯ ವಿಗ್ರಹ, ಮತ್ತು ಮಹಿಷಾಸುರನ ಪ್ರತಿಮೆಗೆ ಹೆಸರಾಗಿದೆ.

ಮೈಸೂರಿನ ಚಾಮರಾಜೇಂದ್ರ ವನ್ಯ ಮೃಗಾಲಯ, ಅಥವಾ "ಮೈಸೂರು ಝೂ", ಭಾರತದ ದೊಡ್ಡ ಮೃಗಾಲಯಗಳಲ್ಲಿ ಒಂದು. ಇತ್ತೀಚೆಗೆ ಕೆಲವು ಪ್ರಾಣಿಗಳು ನಿಗೂಢವಾಗಿ ಸಾವಿಗೀಡಾಗಿದ್ದು ಈ ಮೃಗಾಲಯ ಸ್ವಲ್ಪ ವಿವಾದಕ್ಕೆ ಸಿಲುಕಿತ್ತು.

ಮೈಸೂರಿನ ಆಕರ್ಷಣೆಗಳಲ್ಲಿ ಇನ್ನೊಂದು ಮಾನಸಗಂಗೋತ್ರಿ (ಮೈಸೂರು ವಿಶ್ವವಿದ್ಯಾಲಯದ ಆವರಣ). ಇನ್ನು ಕೆಲವು ಸ್ಥಳಗಳೆಂದರೆ ನೈಸರ್ಗಿಕ ಚರಿತ್ರೆ ವಸ್ತುಸಂಗ್ರಹಾಲಯ, ರೈಲ್ವೇ ವಸ್ತುಸಂಗ್ರಹಾಲಯ, ಕಲಾ ಮಂದಿರ, ಕುಕ್ಕರಹಳ್ಳಿ ಕೆರೆ, ಪುಷ್ಪಕಾಶಿ (ಪುಷ್ಪೋದ್ಯಾನ), ಕಾರಂಜಿ ಕೆರೆ, ಮೈಸೂರು ರೇಷ್ಮೆ ಕಾರ್ಖಾನೆ ಮುಂತಾದವು.

No comments:

Post a Comment