ನಮ್ಮ ಕರ್ನಾಟಕ ವೈಭವಕ್ಕೆ ಸ್ವಾಗತ, ಸುಸ್ವಾಗತ

ಕನ್ನಡ ನಾಡಿನ ಅಂದವ ನೋಡ, ಸಾಹಿತ್ಯ ಸಂಸ್ಕೃತಿಯ ಕಲೆಬೀಡ, ಕನ್ನಡ ನಾಡಿನ ಅಂದವ ಸವಿಯ ಬಾರ, ನೀ ಬಂದು ಒಮ್ಮೆ ನೋಡ ಬಾರ, -(ಮಾ.ಕೃ.ಮಂಜು) ಇದು ಕನ್ನಡ ನಾಡಿನ ದೇವಾಲಯಗಳು, ಪ್ರಸಿದ್ಧ ಸ್ಥಳಗಳನ್ನು ಪರಿಚಯಿಸುವ ತಾಣ. ಕರ್ನಾಟಕದ ವೈಭವವನ್ನು ಜಗತ್ತಿಗೆ ಪರಿಚಯಿಸುವ ಪುಟ್ಟ ಪ್ರಯತ್ನ.
ಬಂಧುಗಳೇ ನಿಮ್ಮ ಊರಿನ ಪ್ರಸಿದ್ಧವಾದ ಸ್ಥಳಗಳ, ದೇವಾಲಯಗಳ ಪೋಟೋಗಳನ್ನು/ಮಾಹಿತಿಗಳನ್ನು "ನಮ್ಮ ಕರ್ನಾಟಕ ವೈಭವ"ದಲ್ಲಿ ಮೂಡಿಬರಬೇಕೇ ಹಾಗಿದ್ದರೆ ನನಗೆ ಮೇಲ್ ಕಳುಹಿಸಿಕೊಡಿ.
ನನ್ನ ಮೇಲ್ : makrumanju@gmail.com

Thursday, March 26, 2009

ಶ್ರವಣಬೆಳಗೊಳ





ಶ್ರವಣ ಬೆಳಗೊಳ (Shravanabelagola) ಹಾಸನ ಜಿಲ್ಲೆಯ ಐತಿಹಾಸಿಕ ಧಾರ್ಮಿಕ, ಪ್ರವಾಸಿ ತಾಣ. ಶ್ರವಣ ಬೆಳಗೊಳದಲ್ಲಿ ವಿಶ್ವವಿಖ್ಯಾತ ೫೮'೮"(೧೮ ಮೀಟರ್ ) ಅಡಿ ಎತ್ತರದಬಾಹುಬಲಿಯ ಮೂರ್ತಿಯಿರುವುದು. ಜೈನರ ಧಾರ್ಮಿಕ ಕೇಂದ್ರವಾದರೂ, ಇತೆರೆ ಹಲವರು ಕೂಡ ಬಂದು ಪೂಜೆ ಸಲ್ಲಿಸುತ್ತಾರೆ. 

ಗೊಮ್ಮಟೇಶ್ವರ, ಶ್ರವಣಬೆಳಗೊಳ
ಏಷ್ಯ ಖಂಡದಲ್ಲಿಯೇ ಅತಿ ಎತ್ತರದ(೫೭ ಅಡಿ)ಮತ್ತು ಭಾರತದ ಅತಿ ಎತ್ತರದ ಏಕಶಿಲಾ ವಿಗ್ರಹಗಳಲ್ಲಿಯೇ ದೊಡ್ಡದಾದ ಗೊಮ್ಮಟನ ಶಿಲೆಯಿರುವ ಶ್ರವಣಬೆಳಗೊಳ ಪ್ರಸಿದ್ಧ ಜೈನ ಪುಣ್ಯಕ್ಷೇತ್ರ. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲ್ಲೂಕಿನ ಹೋಬಳಿ ಕೇಂದ್ರವುಬೆಂಗಳೂರಿನಿಂದ ೧೪೫ ಕಿ.ಮೀಗಳ ದೂರದಲ್ಲಿದೆ.ಶ್ರವಣ ಬೆಳಗೊಳದ ವಿಂಧ್ಯಗಿರಿಯ ಮೇಲೆ ಗ್ರಾನೈಟಿನಲ್ಲಿ ಕಡೆಯಲಾಗಿರುವ ಈ ಮೂರ್ತಿಯನ್ನು ಚಾವುಂಡರಾಯನು ಬೃಹದಾಕಾರದ ವಿಗ್ರಹವನ್ನು ಕ್ರಿ.ಶ.೯೭೩ರಲ್ಲಿ ಕೆತ್ತಿಸಿದನು.ಅರಿಷ್ಟ ನೇಮಿ ಎಂಬುವ ಶಿಲ್ಪಿ ಕೆತ್ತಿದನೆಂದು ಹೇಳಲಾಗುತ್ತದೆ. 
ಶ್ರವಣಬೆಳಗೊಳದ ಗೊಮ್ಮಟ ಮೂರ್ತಿಯಲ್ಲಿನ ಶಾಸನ
ವಿಂದ್ಯಗಿರಿ, ಶ್ರವಣಬೆಳಗೊಳ

No comments:

Post a Comment