ನಮ್ಮ ಕರ್ನಾಟಕ ವೈಭವಕ್ಕೆ ಸ್ವಾಗತ, ಸುಸ್ವಾಗತ

ಕನ್ನಡ ನಾಡಿನ ಅಂದವ ನೋಡ, ಸಾಹಿತ್ಯ ಸಂಸ್ಕೃತಿಯ ಕಲೆಬೀಡ, ಕನ್ನಡ ನಾಡಿನ ಅಂದವ ಸವಿಯ ಬಾರ, ನೀ ಬಂದು ಒಮ್ಮೆ ನೋಡ ಬಾರ, -(ಮಾ.ಕೃ.ಮಂಜು) ಇದು ಕನ್ನಡ ನಾಡಿನ ದೇವಾಲಯಗಳು, ಪ್ರಸಿದ್ಧ ಸ್ಥಳಗಳನ್ನು ಪರಿಚಯಿಸುವ ತಾಣ. ಕರ್ನಾಟಕದ ವೈಭವವನ್ನು ಜಗತ್ತಿಗೆ ಪರಿಚಯಿಸುವ ಪುಟ್ಟ ಪ್ರಯತ್ನ.
ಬಂಧುಗಳೇ ನಿಮ್ಮ ಊರಿನ ಪ್ರಸಿದ್ಧವಾದ ಸ್ಥಳಗಳ, ದೇವಾಲಯಗಳ ಪೋಟೋಗಳನ್ನು/ಮಾಹಿತಿಗಳನ್ನು "ನಮ್ಮ ಕರ್ನಾಟಕ ವೈಭವ"ದಲ್ಲಿ ಮೂಡಿಬರಬೇಕೇ ಹಾಗಿದ್ದರೆ ನನಗೆ ಮೇಲ್ ಕಳುಹಿಸಿಕೊಡಿ.
ನನ್ನ ಮೇಲ್ : makrumanju@gmail.com

Thursday, March 26, 2009

ನಾಡ ರಾಜಧಾನಿ ಬೆಂಗಳೂರು

ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ
ಲಾಲ್ ಬಾಗ್


 

ವಿಧಾನ ಸೌಧ


 
ನಂದಿ ದೇವಸ್ಥಾನ
ಲೀಲಾ ಪ್ಯಾಲೇಸ್
ಬೆಂಗಳೂರು ಅರಮನೆ
ಬೆಂಗಳೂರು ಅರಮನೆ

ಕೃಷ್ಣರಾಜ ಮಾರುಕಟ್ಟೆ


ಬೆಂಗಳೂರು ಕರ್ನಾಟಕದ ರಾಜಧಾನಿಕರ್ನಾಟಕದ ದಕ್ಷಿಣ-ಪೂರ್ವ ಭಾಗದಲ್ಲಿದ್ದು, ಭಾರತದ ೩ನೇ ದೊಡ್ಡ ನಗರವಾಗಿದೆ. ಬೆಂಗಳೂರು ೧೫೩೭ರಲ್ಲಿ ಕೆಂಪೇಗೌಡ (೧೫೧೦ - ೧೫೭೦) ರಾಜಧಾನಿಯಾಗಿತ್ತು.ಈ ನಗರವನ್ನು ಕೆಂಪೇಗೌಡರು ಕಂಡುಹಿಡಿದರು. ಈ ನಗರವು ಸಿಲಿಕಾನ್ ಸಿಟಿ ಮತ್ತು ಉದ್ಯಾನ ನಗರ ಎಂದು ಪ್ರಖ್ಯಾತವಾಗಿದೆ. ಕೆಂಪೇಗೌಡ (೧೫೧೦-೧೫೭೦) ಈ ನಗರವನ್ನು "ಗಂಡು ಭೂಮಿ" ಮತ್ತು "ನಾಯಕರ ರಾಜ್ಯ" ಎಂದು ಹೇಳುತಿದ್ದರು. ಪ್ರಮುಖವಾಗಿ ನಗರದಲ್ಲಿ ಎರಡು ಮುಖ್ಯ ರಸ್ತೆಗಳಿದ್ದವು. ಅವು "ಚಿಕ್ಕಪೇಟೆ" ಮತ್ತು "ದೊಡ್ಡಪೇಟೆ" ರಸ್ತೆಗಳು.
ಕೆಂಪೇಗೌಡರ ಮಗನಾದ ಕೆಂಪೇಗೌಡ-೨ ಅನೇಕ ದೇವಸ್ಥಾನ ಮತ್ತು ಗೋಪುರಗಳನ್ನು ನಿರ್ಮಿಸಿದನು. ಅವುಗಳಲ್ಲಿ ಪ್ರಮುಖವಾದ ನಾಲ್ಕು ಗೋಪುರಗಳನ್ನು ಈ ಸ್ಥಳಗಳಲ್ಲಿ ಕಾಣಬಹುದಾಗಿದೆ.
  • ಲಾಲಭಾಗ್
  • ಕೆಂಪಾಂಬುಧಿ ಕೆರೆ
  • ಅಲಸೂರು ಕೆರೆ
  • ಮೇಖ್ರಿ ವೃತ್ತ (ಸರ್ಕಲ್)

1 comment: